ಮುಂಬೈ: ಆಕಾಸಾ ಏರ್ ವಿಮಾನಯಾನ ಕಂಪನಿಯು ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆಡಿಸೆಂಬರ್ 10ರಿಂದ ವಿಮಾನ ಸೇವೆ ಆರಂಭಿಸುವುದಾಗಿ ಶುಕ್ರವಾರ ಹೇಳಿದೆ.
ಆಗಸ್ಟ್ 7ರಂದು ಕಾರ್ಯಾಚರಣೆ ಆರಂಭಿಸಿದ ಕಂಪನಿಯ ನೆಟ್‌ವರ್ಕ್ ವ್ಯಾಪ್ತಿಗೆ ಹತ್ತನೇ ನಗರ ಸೇರ್ಪಡೆ ಆಗಿದೆ. ಇದರಲ್ಲಿ 8 ನಗರಗಳು ಬೆಂಗಳೂರಿನೊಂದಿಗೆ ಸಂಪರ್ಕ ಹೊಂದಿವೆ ಎಂದು ಕಂಪನಿ ಮಾಹಿತಿ ನೀಡಿದೆ.
ಈ ಹೊಸ ಮಾರ್ಗದಲ್ಲಿ ನಿತ್ಯವೂ ಎರಡು ವಿಮಾನ ಸೇವೆ ಲಭ್ಯವಾಗಲಿದೆ. ಮೊದಲ ಸೇವೆಯು ಡಿಸೆಂಬರ್ 10ರಿಂದ ಮತ್ತು ಎರಡನೇ ಸೇವೆಯು ಡಿಸೆಂಬರ್ 12ರಿಂದ ಆರಂಭ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರು–ಅಹಮದಾಬಾದ್ ಮಧ್ಯೆ ಡಿಸೆಂಬರ್ 17ರಿಂದ ವಿಮಾನ ಸಂಚಾರವನ್ನು ಹೆಚ್ಚಿಸಲಾಗುವುದು ಎಂದು ಕಂಪನಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.