ಶುಕ್ರವಾರ, ಮಾರ್ಚ್ 24, 2023
22 °C

ಎಂಎಫ್‌, ಎಫ್‌ಡಿ ಸೇವೆಗೆ ಅಮೆಜಾನ್‌ ಪೇ ಸಿದ್ಧತೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆಜಾನ್‌ ಪೇ ಇಂಡಿಯಾ ತನ್ನ ಗ್ರಾಹಕ
ರಿಗೆ ಮ್ಯೂಚುವಲ್ ಫಂಡ್ ಮತ್ತು ನಿಶ್ಚಿತ ಠೇವಣಿಗಳಲ್ಲಿ (ಎಫ್.ಡಿ.) ಹೂಡಿಕೆ ಮಾಡುವ ಸೇವೆ ನೀಡಲು ಮುಂದಾಗಿದೆ. ತನ್ನ ಪ್ರತಿಸ್ಪರ್ಧಿ ಗೂಗಲ್ ಪೇ ಇದೇ ಬಗೆಯ ಸೌಲಭ್ಯಕ್ಕೆ ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಅಮೆಜಾನ್ ಈ ನಿರ್ಧಾರ ಮಾಡಿದೆ.

ಅಮೆಜಾನ್ ಪೇ ಇಂಡಿಯಾ, ಹೂಡಿಕೆ ಪ್ಲಾಟ್‌ಫಾರ್ಮ್ Kuvera.in (ಕುವೇರಾ) ಜೊತೆ ಒಪ್ಪಂದ ಮಾಡಿ
ಕೊಳ್ಳುವುದಾಗಿ ಬುಧವಾರ ಘೋಷಿ
ಸಿದೆ. ಗ್ರಾಹಕರು ಮ್ಯೂಚುವಲ್ ಫಂಡ್ ಮತ್ತು ಎಫ್‌.ಡಿ.ಗಳಲ್ಲಿ ಹೂಡಿಕೆ ಮಾಡಬ
ಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಠೇವಣಿ ಆಯ್ಕೆಯನ್ನು ನೀಡಲು ಗೂಗಲ್‌ ಪೇ, ಈಕ್ವಿಟಾಸ್ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿ
ಕೊಂಡಿದೆ. ಅಮೆಜಾನ್ ಪೇ ತನ್ನ ಮೂಲಕ ಗ್ರಾಹಕರು ಠೇವಣಿ ಇರಿಸಬಹು
ದಾದ ಬ್ಯಾಂಕುಗಳು ಯಾವುವು ಎಂಬ ವಿವರ ನೀಡಿಲ್ಲ ಗೂಗಲ್‌ ಪೇ ಮತ್ತು ಬ್ಯಾಂಕ್‌ ನಡುವಿನ ಒಪ್ಪಂದದಿಂದ ಹಣ
ಕಾಸು ವ್ಯವಸ್ಥೆಯ ಮೇಲೆ ಆಗಲಿರುವ ಪರಿ
ಣಾಮಗಳ ಕುರಿತು ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು