ನ್ಯೂಯಾರ್ಕ್: ಇ-ಕಾಮರ್ಸ್ ವಲಯದ ಜಾಗತಿಕ ದೈತ್ಯ ಕಂಪನಿ ಅಮೆಜಾನ್, ವಿಶ್ವದಾದ್ಯಂತ 16 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ.

ಕಂಪನಿಯ ಪುನರ್ರಚನೆಯ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾಗಿರುವುದಾಗಿ ಅಮೆಜಾನ್ ಕಂಪನಿಯು ಬುಧವಾರ ತಿಳಿಸಿದೆ.

ಕಳೆದ ಅಕ್ಟೋಬರ್ ತಿಂಗಳಿನಲ್ಲಿ 14 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿತ್ತು.

ಅಕ್ಟೋಬರ್ನಲ್ಲಿ ಮಾಧ್ಯಮ ವರದಿಗಳ ಪ್ರಕಾರ, ಅಮೆಜಾನ್ ಕಂಪನಿಯು 3.50 ಲಕ್ಷ ಕಚೇರಿ ಸಿಬ್ಬಂದಿ ಪೈಕಿ 30 ಸಾವಿರ (ಶೇ 10ರವರೆಗೆ) ಸಿಬ್ಬಂದಿಯನ್ನು ವಜಾಗೊಳಿಸಲಿದೆ ಎನ್ನಲಾಗಿತ್ತು. ಇದು ಕಂಪನಿಯ ವಿತರಣಾ ಮತ್ತು ದಾಸ್ತಾನು ಕೇಂದ್ರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿತ್ತು. ಕಂಪನಿಯು 15 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.