ಗುರುವಾರ , ನವೆಂಬರ್ 21, 2019
21 °C

ಅಪ್‌ಸ್ಟಾಕ್ಸ್‌ನಲ್ಲಿ ಟೈಗರ್ ಗ್ಲೋಬಲ್‌ ಹೂಡಿಕೆ

Published:
Updated:

ಬೆಂಗಳೂರು: ರಿಟೇಲ್ ಷೇರು ದಲ್ಲಾಳಿ (ಬ್ರೋಕಿಂಗ್) ಸಂಸ್ಥೆಯಾಗಿರುವ ಅಪ್‌ಸ್ಟಾಕ್ಸ್‌, ಅಮೆರಿಕದ ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್‌ನಿಂದ ಸಾಂಸ್ಥಿಕ ಹೂಡಿಕೆ ರೂಪದಲ್ಲಿ ₹ 175 ಕೋಟಿ ಸಂಗ್ರಹಿಸಿದೆ.

ತಂತ್ರಜ್ಞಾನ ನೆರವಿನಿಂದ ಅಪ್‌ಸ್ಟಾಕ್ಸ್  ಡಿಸ್ಕೌಂಟ್ ಬ್ರೋಕಿಂಗ್ ಪರಿಕಲ್ಪನೆಯಲ್ಲಿ ಹೊಸತನ ತರುತ್ತಿದೆ. ‘ನಿಫ್ಟಿ’ ಅಂಕಿಅಂಶಗಳ ಪ್ರಕಾರ, ಅಪ್‌ಸ್ಟಾಕ್ಸ್ ವೇಗವಾಗಿ ಬೆಳೆಯುತ್ತಿರುವ ರಿಟೇಲ್ ಬ್ರೋಕಿಂಗ್‌ ಸಂಸ್ಥೆಯಾಗಿದೆ. ಮೂರು ವರ್ಷಗಳಲ್ಲಿ ಸಂಸ್ಥೆಯಲ್ಲಿ ವಿಶ್ವಾಸ ಇರಿಸಿದ ಗ್ರಾಹಕರ ಸಂಖ್ಯೆಯಲ್ಲಿ 12 ಪಟ್ಟು ಹೆಚ್ಚಳವಾಗಿದೆ.

‘ಬ್ರೋಕರೇಜ್‌ ಕಡಿಮೆ ಮಾಡಿ ಗ್ರಾಹಕರ ಲಾಭ ಹೆಚ್ಚಿಸಿ ಹೊಸ ಪೀಳಿಗೆಯಲ್ಲಿ ಷೇರು ವಹಿವಾಟು ಜನಪ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ’ ಎಂದು ಕಂಪನಿಯ ಸಿಇಒ ರವಿಕುಮಾರ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)