ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 47,000 ದಾಟಿದ ಅಡಿಕೆ ಧಾರಣೆ

Last Updated 24 ಜನವರಿ 2023, 18:50 IST
ಅಕ್ಷರ ಗಾತ್ರ

ಚನ್ನಗಿರಿ (ದಾವಣಗೆರೆ ಜಿಲ್ಲೆ): ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿದ್ದು, ಕ್ವಿಂಟಲ್‌ಗೆ ₹ 47,000 ಗಡಿ ದಾಟಿದೆ. ಅಕ್ಟೋಬರ್‌ನಲ್ಲಿ ಅಡಿಕೆ ಧಾರಣೆ ₹ 53,000 ದಾಟಿತ್ತು. ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಡಿಸೆಂಬರ್‌ನಲ್ಲಿ ₹ 39,000ಕ್ಕೆ ಕುಸಿದಿತ್ತು.

ವಾರದಿಂದ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಜನವರಿ 23ರಂದು ₹ 47,000ದ ಗಡಿ ದಾಟಿದೆ. ಹೀಗಾಗಿ ಬೆಳೆಗಾರರು ಅಡಿಕೆ ಮಾರಲು ಮುಂದಾಗುತ್ತಿದ್ದಾರೆ.

‘ಡಿಸೆಂಬರ್‌ನಲ್ಲಿ ಅಡಿಕೆ ಧಾರಣೆ ಕುಸಿದಾಗ, ಜನವರಿಯಲ್ಲಿ ಏರಿಕೆಯಾಗಬಹುದು ಎಂದು ಧೈರ್ಯ ತುಂಬಿದ್ದೆ.
ಜ. 23ರಂದು ರಾಶಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ಬೆಲೆ ₹47,659ಕ್ಕೆ ಮಾರಾಟವಾಗಿದೆ. ಕನಿಷ್ಠ ಬೆಲೆ ₹45,912 ಇತ್ತು. ಸರಾಸರಿ ₹47,005ಕ್ಕೆ ಮಾರಾಟವಾಗಿದೆ. ಬೆಟ್ಟೆ (ಸೆಕೆಂಡ್ಸ್‌) ಅಡಿಕೆ ಗರಿಷ್ಠ ₹34,789, ಕನಿಷ್ಠ ಬೆಲೆ ₹34,779 ಇದೆ. ಇನ್ನು ಸ್ವಲ್ಪ ದಿನ ಅಡಿಕೆ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ಹೇಳಿದರು.

‘ಅಧಿಕ ಮಳೆಯಿಂದಾಗಿ ಇಳುವರಿ ಜೊತೆಗೆ ಧಾರಣೆಯೂ ಕುಸಿದು ಆತಂಕವಾಗಿತ್ತು. ಈಗ ಧಾರಣೆ ಹೆಚ್ಚಾಗಿದ್ದರಿಂದ ನಿಶ್ಚಿಂತೆಯಿಂದ ಅಡಿಕೆ ಮಾರಾಟ ಮಾಡುತ್ತಿದ್ದೇನೆ’ ಎಂದು ‌ತಾಲ್ಲೂಕಿನ ಗುಳ್ಳೇಹಳ್ಳಿ ಗ್ರಾಮದ ಅಡಿಕೆ ಬೆಳೆಗಾರ ಎಂ.ಎಸ್. ಷಣ್ಮುಖ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT