ಬುಧವಾರ, ಮೇ 18, 2022
28 °C
ಡಬಲ್‌ ಚೋಲ್‌ಗೆ ₹430– ₹460 ಬೆಲೆ

ಅಡಿಕೆ ಧಾರಣೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಅಡಿಕೆ ಧಾರಣೆಯಲ್ಲಿ ಹೆಚ್ಚಳವಾಗಿದ್ದು ಡಬಲ್‌ ಚೋಲ್‌ ಅಡಿಕೆ ಪ್ರತಿ ಕೆ.ಜಿ.ಗೆ ₹ 430ರಿಂದ ₹ 460, ಸಿಂಗಲ್‌ ಚೋಲ್‌ಗೆ ₹ 425ರಿಂದ ₹ 455 ಹಾಗೂ ಹೊಸ ಅಡಿಕೆಗೆ ₹ 345ರಿಂದ ₹ 395 ದರ ಸಿಗುತ್ತಿದೆ.

2020ರ ನವೆಂಬರ್‌ನಲ್ಲಿ ಸಿಂಗಲ್‌ ಚೋಲ್‌ ಅಡಿಕೆಗೆ ₹ 290, ಡಬಲ್‌ ಚೋಲ್‌ಗೆ ₹ 300 ಧಾರಣೆ ಇತ್ತು.

ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳವಾಗಿದೆ, ವಿದೇಶದಿಂದ ಅಕ್ರಮವಾಗಿ ಬರುತ್ತಿದ್ದ ಅಡಿಕೆಗೆ ಕೋವಿಡ್‌–19 ಸಂದರ್ಭದಲ್ಲಿ ಕಡಿವಾಣ ಬಿದ್ದಿದೆ. ಇದರಿಂದ ಧಾರಣೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕ್ಯಾಂಪ್ಕೊ ಸಂಸ್ಥೆಯು ಅಡಿಕೆಗೆ ಉತ್ತಮ ಧಾರಣೆ ನೀಡುತ್ತಿರುವ ಪರಿಣಾಮ, ಖಾಸಗಿ ವರ್ತಕರೂ ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದಾರೆ.

‘ಅಡಿಕೆ ಇಳುವರಿ ಶೇ 40ರಷ್ಟು ಕಡಿಮೆ ಇದ್ದು, ದಾಸ್ತಾನು ಕುಸಿದಿದೆ. ಹೀಗಾಗಿಯೂ ಧಾರಣೆ ಹೆಚ್ಚಾಗಿದೆ’ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್ ಕೊಡ್ಗಿ ತಿಳಿಸಿದರು.

‘ಅಡಿಕೆಗೆ ಕೊಳೆ ರೋಗದಿಂದಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಧಾರಣೆ ಹೆಚ್ಚಳವಾಗಿದ್ದರೂ, ಅಡಿಕೆ ದಾಸ್ತಾನು ಇಲ್ಲ’ ಎಂದು ಕೃಷಿಕರು ಹೇಳುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು