ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಜಾಜ್‌ ಫೈನಾನ್ಸ್‌ ಜೊತೆ ಅಶೋಕ್‌ ಲೇಲ್ಯಾಂಡ್‌ ಪಾಲುದಾರಿಕೆ

Published 28 ಜೂನ್ 2024, 15:10 IST
Last Updated 28 ಜೂನ್ 2024, 15:10 IST
ಅಕ್ಷರ ಗಾತ್ರ

ನವದೆಹಲಿ: ವಾಣಿಜ್ಯ ವಾಹನ ತಯಾರಕ ಕಂಪನಿ ಅಶೋಕ್‌ ಲೇಲ್ಯಾಂಡ್‌ ತನ್ನ ವಾಣಿಜ್ಯ ವಾಹನಗಳಿಗೆ ಹಣಕಾಸಿನ ನೆರವು ಒದಗಿಸಲು ಬಜಾಜ್‌ ಫೈನಾನ್ಸ್‌ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.

ಈ ಕುರಿತು ಬಜಾಜ್ ಫಿನ್‌ಸರ್ವ್‌ನ ಬಜಾಜ್ ಫೈನಾನ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಅಶೋಕ್ ಲೇಲ್ಯಾಂಡ್ ಶುಕ್ರವಾರ ತಿಳಿಸಿದೆ.

ಈ ಮಹತ್ವದ ಪಾಲುದಾರಿಕೆಯು ಅಶೋಕ್‌ ಲೇಲ್ಯಾಂಡ್‌ನ ಮಾರುಕಟ್ಟೆ ಸ್ಥಾನವನ್ನು ಬಲಪಡಿಸಲಿದೆ ಎಂದು ಕಂಪನಿಯ ಸಿಎಫ್‌ಒ ಕೆ.ಎಂ.ಬಾಲಾಜಿ ಹೇಳಿದ್ದಾರೆ.

ಎರಡೂ ಕಂಪನಿಗಳ ಮಾರಾಟ ಮತ್ತು ಮಾರ್ಕೆಟಿಂಗ್ ತಂಡಗಳು ಜಂಟಿ ವ್ಯಾಪಾರೋದ್ಯಮ ಮತ್ತು ಹಣಕಾಸು ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಒಟ್ಟಾಗಿ ಕೆಲಸ ಮಾಡಲಿವೆ. ಪಾಲುದಾರಿಕೆಯ ಅಡಿಯಲ್ಲಿ ವ್ಯಾಪಾರದ ಪ್ರಮಾಣವನ್ನು ಪರಸ್ಪರ ಹೆಚ್ಚಿಸುತ್ತವೆ ಎಂದು ಬಜಾಜ್‌ ಫೈನಾನ್ಸ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಅನೂಪ್‌ ಸಹಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT