ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳ ರಿಟೇಲ್‌ ಮಾರಾಟ ಶೇ 55ರಷ್ಟು ಇಳಿಕೆ

Last Updated 10 ಜೂನ್ 2021, 15:12 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ನ ಎರಡನೇ ಅಲೆ ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದ ಪರಿಣಾಮ ಏಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳಿನಲ್ಲಿ ವಾಹನಗಳ ರಿಟೇಲ್‌ ಮಾರಾಟವು ಶೇಕಡ 55ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಹೇಳಿದೆ.

ನಿರ್ಬಂಧಗಳು ಜಾರಿಯಲ್ಲಿದ್ದ ಕಾರಣ ಹಲವು ರಾಜ್ಯಗಳಲ್ಲಿ ಬಹುತೇಕ ಷೋರೂಂಗಳು ಮುಚ್ಚಿದ್ದವು. ಇದರಿಂದಾಗಿ ವಾಹನಗಳ ನೋಂದಣಿಯು ಏಪ್ರಿಲ್‌ಗೆ ಹೋಲಿಸಿದರೆ ಮೇನಲ್ಲಿ 5.35 ಲಕ್ಷಕ್ಕೆ ಇಳಿಕೆ ಆಗಿದೆ. ಏಪ್ರಿಲ್‌ನಲ್ಲಿ 11.85 ಲಕ್ಷ ವಾಹನಗಳು ನೋಂದಣಿ ಆಗಿದ್ದವು ಎಂದು ಅದು ತಿಳಿಸಿದೆ.

ಪ್ರಯಾಣಿಕ ವಾಹನ ಮಾರಾಟವು ಮೇನಲ್ಲಿ ಶೇ 59ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ವಾಹನ ಮಾರಾಟ ಶೇ 53ರಷ್ಟು, ತ್ರಿಚಕ್ರ ವಾಹನ ಮಾರಾಟ ಶೇ 76ರಷ್ಟು ಮತ್ತು ವಾಣಿಜ್ಯ ವಾಹನಗಳ ಮಾರಾಟ ಶೇ 66ರಷ್ಟು ಕುಸಿತ ಕಂಡಿದೆ ಎಂದು ಅದು ಮಾಹಿತಿ ನೀಡಿದೆ. ಟ್ರ್ಯಾಕ್ಟರ್‌ ಮಾರಾಟ ಸಹ ಶೇ 57ರಷ್ಟು ಇಳಿಕೆಯಾಗಿದೆ.

ಸಾಲ ಮರುಹೊಂದಾಣಿಕೆಯ ಬದಲು, ವಹಿವಾಟಿನ ಮಿತಿ ಇಲ್ಲದೇ ಎಲ್ಲಾ ವಲಯಗಳ ವಿತರಕರಿಗೂ 90 ದಿನಗಳವರೆಗೆ ಸಾಲ ಮರುಪಾವತಿಯನ್ನು ಮುಂದೂಡುವಂತೆ ಒಕ್ಕೂಟದ ಅಧ್ಯಕ್ಷ ವಿಂಕೇಶ್‌ ಗುಲಾಟಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT