ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಹೊಸ ನೀತಿ ರೂಪಿಸಿದ ಎಕ್ಸಿಸ್‌ ಬ್ಯಾಂಕ್‌

Last Updated 7 ಸೆಪ್ಟೆಂಬರ್ 2021, 4:06 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿ ವಲಯದ ಎಕ್ಸಿಸ್‌ ಬ್ಯಾಂಕ್, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹೊಸ ನೀತಿಗಳನ್ನು ಜಾರಿಗೆ ತಂದಿದೆ.

ಕೆಲಸದ ವಾತಾವರಣದಲ್ಲಿ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ‘ComeAsYouAre’ ನೀತಿಯನ್ನು ರೂಪಿಸಿದೆ.

ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಬ್ಯಾಂಕ್ ಖಾತೆಗಳಿಗೆ ತಮ್ಮ ಜೀವನ ಸಂಗಾತಿಗಳನ್ನು ನಾಮನಿರ್ದೇಶನ ಮಾಡಲು ಅವಕಾಶ ಕಲ್ಪಿಸಿದೆ. ಜಂಟಿ ಉಳಿತಾಯ ಖಾತೆ ತೆರೆಯಲು ಹಾಗೂ ಅವಧಿ ಠೇವಣಿ ಖಾತೆಗಳನ್ನು ಸಹ ಅವರು ತೆರೆಯಬಹುದಾಗಿದೆ.

ಉದ್ಯೋಗಿಗಳು ವಿವಾಹಿತರಾಗದೇ ಇದ್ದರೂ ತಮ್ಮ ಜೀವನ ಸಂಗಾತಿಗೆ ಮೆಡಿಕ್ಲೇಮ್ ಸೌಲಭ್ಯ ಒದಗಿಸಬಹುದು.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಆಯ್ಕೆಯ ಶೌಚಾಲಯ ಬಳಸಬಹುದು. ಸೆಪ್ಟೆಂಬರ್‌ 20ರಿಂದ ಜಾರಿಗೆ ಬರುವಂತೆ ಗ್ರಾಹಕರು ಈ ಸೌಲಭ್ಯಗಳನ್ನು ಬಳಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT