ಬೆಂಗಳೂರು: ಸರ್ಕಾರಿ ಸ್ವಾಮ್ಯದ ಮುಂಚೂಣಿ ಬ್ಯಾಂಕ್ಗಳಲ್ಲಿ ಒಂದಾಗಿರುವ ಬ್ಯಾಂಕ್ ಆಫ್ ಬರೋಡಾ, ‘ವಿಶ್ವಾಸ, ಹೊಸತನ ಮತ್ತು ಸುಸ್ಥಿರ ಬೆಳವಣಿಗೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ 118ನೇ ಸಂಸ್ಥಾಪನಾ ದಿನವನ್ನು ಆಚರಿಸಿದೆ’ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ಅವರು ಮುಂಬೈನಲ್ಲಿ ನಡೆದ ಈ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ದಿನಾಚರಣೆಯ ಅಂಗವಾಗಿ ಬ್ಯಾಂಕ್ ಆಫ್ ಬರೋಡಾ ಹೊಸತನದ ಹಲವು ಉತ್ಪನ್ನಗಳನ್ನು ಹಾಗೂ ಉಪಕ್ರಮಗಳನ್ನು ಗ್ರಾಹಕರಿಗೆ ಪರಿಚಯಿಸುವ ಆಲೋಚನೆಯನ್ನು ತೆರೆದಿಟ್ಟಿತು.

ಬ್ಯಾಂಕ್ ಜಾರಿಗೆ ತಂದಿರುವ ಅತ್ಯಂತ ಪ್ರಮುಖವಾದ ಉಪಕ್ರಮಗಳಲ್ಲಿ ‘ಬಿಒಬಿ ವರ್ಲ್ಡ್ ಬಿಸಿನೆಸ್ ಆ್ಯಪ್’, ಎಂಎಸ್ಎಂಇ ವಲಯದ ಉದ್ದಿಮೆಗಳಿಗಾಗಿ, ವ್ಯಾಪಾರಿಗಳು ಹಾಗೂ ಕಾರ್ಪೊರೇಟ್ ಗ್ರಾಹಕರಿಗಾಗಿ ಹೊಸದಾದ ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಜಾಗತಿಕವಾಗಿ ಬಳಕೆಗೆ ಬರುವ ಯುಪಿಐ ಸೌಲಭ್ಯಗಳನ್ನು ಹೊಂದಿರುವ ಬಿಒಬಿ ಇ-ಪೇ ಇಂಟರ್ನ್ಯಾಷನಲ್ ಆ್ಯಪ್, ದೃಷ್ಟಿದೋಷ ಇರುವ ವ್ಯಕ್ತಿಗಳಿಗೆ ನೆರವಾಗುವ ಉದ್ದೇಶದ ಬಿಒಬಿ ಇನ್ಸೈಟ್ ಬ್ರೈಲ್ ಡೆಬಿಟ್ ಕಾರ್ಡ್ ಸೇರಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ
ದೇಬದತ್ತ ಚಾಂದ್, ‘ಗ್ರಾಹಕರ ಮಹತ್ವಾಕಾಂಕ್ಷೆಗಳಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಬ್ಯಾಂಕ್ ಆಫ್ ಬರೋಡಾ ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯಿಂದ ಅವರ ವಿಶ್ವಾಸವನ್ನು ಗಳಿಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.