ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಆಫ್‌ ಇಂಡಿಯಾಗೆ ₹564 ಕೋಟಿ ದಂಡ

Published 29 ಮಾರ್ಚ್ 2024, 15:26 IST
Last Updated 29 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ಘೋಷಣೆ ವೇಳೆ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪದ ಮೇರೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಇಂಡಿಯಾಗೆ, ಆದಾಯ ತೆರಿಗೆ ಇಲಾಖೆಯು ₹564.44 ಕೋಟಿ ದಂಡ ವಿಧಿಸಿದೆ.

2018–19ನೇ ಆರ್ಥಿಕ ವರ್ಷದ ಆದಾಯಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ ಸಲ್ಲಿಸಿದ್ದ ರಿಟರ್ನ್ಸ್‌ ಅನ್ನು ತೆರಿಗೆ ಅಧಿಕಾರಿಗಳು ಮೌಲ್ಯಮಾಪನ ಮಾಡಿದ್ದರು. ಈ ವೇಳೆ ರಿಟರ್ನ್ಸ್‌ನಲ್ಲಿ ಘೋಷಿಸಿದ್ದಕ್ಕಿಂತಲೂ ಆದಾಯ ಹೆಚ್ಚಾಗಿದೆ. ಹಾಗಾಗಿ, ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್‌ 270ಎ ಅನ್ವಯ ದಂಡ ವಿಧಿಸಲಾಗಿದೆ. ಈ ಕುರಿತು ಷೇರುಪೇಟೆಗೆ ಬ್ಯಾಂಕ್‌ ಮಾಹಿತಿ ನೀಡಿದೆ.

‘ರಾಷ್ಟ್ರೀಯ ಅಮೌಖಿಕ ಮೇಲ್ಮನವಿ ಕೇಂದ್ರದ (ಎನ್‌ಎಫ್ಎಸಿ) ಆದಾಯ ತೆರಿಗೆ ಆಯುಕ್ತರಿಗೆ, ಈ ದಂಡದ ಬಗ್ಗೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯು ನಡೆಯುತ್ತಿದೆ’ ಎಂದು ಬ್ಯಾಂಕ್‌ ತಿಳಿಸಿದೆ.

ತೆರಿಗೆ ಇಲಾಖೆಗೆ ಸಲ್ಲಿಸಿರುವ ಆದಾಯದ ವಿವರ ಕುರಿತಂತೆ ನ್ಯಾಯಯುತವಾಗಿ ಸಾಕ್ಷ್ಯಗಳನ್ನು ಮಂಡಿಸಲಾಗುವುದು. ಹಾಗಾಗಿ, ಮೇಲ್ಮನವಿ ಕೇಂದ್ರವು ದಂಡದ ಮೊತ್ತವನ್ನು ಕಡಿಮೆಗೊಳಿಸುವ ಭರವಸೆಯಿದೆ. ಇಲಾಖೆಯ ಈ ಕ್ರಮವು ಬ್ಯಾಂಕ್‌ನ ಹಣಕಾಸಿನ ಕಾರ್ಯಾಚರಣೆ ಅಥವಾ ಇತರೆ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT