ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಿದ ಬ್ಯಾಂಕಿಂಗ್‌ ವಂಚನೆ

Last Updated 3 ಜುಲೈ 2022, 13:31 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಂಕಿಂಗ್‌ ವಲಯದಲ್ಲಿ ₹ 100 ಕೋಟಿಗೂ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದೆ.

2020–21ರಲ್ಲಿ ₹ 1.05 ಲಕ್ಷ ಕೋಟಿ ಮೊತ್ತದ ವಂಚನೆ ನಡೆದಿತ್ತು. ಇದಕ್ಕೆ ಹೋಲಿಸಿದರೆ 2021–22ರಲ್ಲಿ ₹ 41 ಸಾವಿರ ಕೋಟಿ ಮೊತ್ತದ ವಂಚನೆ ನಡೆದಿದೆ ಎಂದು ಅಧಿಕೃತ ಅಂಕಿ–ಅಂಶಗಳು ಹೇಳಿವೆ.

ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯು 2020–21ರಲ್ಲಿ 265 ಇದ್ದಿದ್ದು 2021–22ರಲ್ಲಿ 118ಕ್ಕೆ ಇಳಿಕೆ ಆಗಿದೆ.

ವಂಚನೆ ತಡೆಯಲು ಆರ್‌ಬಿಐ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ವಂಚನೆಯ ಬಗ್ಗೆ ಮುಂಚಿತವಾಗಿಯೇ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಸುಧಾರಣೆ, ವಂಚನೆ ತಡೆ ವ್ಯವಸ್ಥೆ ಬಲಪಡಿಸುವಿಕೆ, ದತ್ತಾಂಶ ವಿಶ್ಲೇಷಣೆ, ವಹಿವಾಟು ಮೇಲ್ವಿಚಾರಣೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

ವಂಚನೆಯ ಮೊತ್ತ (ಕೋಟಿಗಳಲ್ಲಿ)

ಬ್ಯಾಂಕ್‌ 2020–21 2021–22

ಸರ್ಕಾರಿ ಬ್ಯಾಂಕ್‌ಗಳು:65,900 28,000

ಖಾಸಗಿ ಬ್ಯಾಂಕ್‌ಗಳು: 39,900 13,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT