ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇಎಲ್‌: ₹ 15 ಸಾವಿರ ಕೋಟಿ ಮೊತ್ತ ವಹಿವಾಟು

Last Updated 1 ಏಪ್ರಿಲ್ 2022, 15:54 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) 2021–22ನೇ ಹಣಕಾಸು ವರ್ಷದಲ್ಲಿ ₹ 15 ಸಾವಿರ ಕೋಟಿ ಮೊತ್ತದ ವಹಿವಾಟು ನಡೆಸಿದೆ. ಈ ಮಾಹಿತಿಯು ತಾತ್ಕಾಲಿವಾಗಿದ್ದು, ಲೆಕ್ಕಪತ್ರ ಪರಿಶೋಧನೆಗೆ ಒಳಗಾಗಿಲ್ಲ ಎಂದು ಕಂಪನಿಯು ತಿಳಿಸಿದೆ.

ಕೋವಿಡ್‌ ಸಾಂಕ್ರಾಮಿಕ ಮತ್ತು ಸೆಮಿಕಂಡಕ್ಟರ್‌ ಕೊರತೆಯಂತಹ ಸಮಸ್ಯೆಗಳ ನಡುವೆಯೂ ಉತ್ತಮ ವಹಿವಾಟು ಸಾಧ್ಯವಾಗಿದೆ ಎಂದು ಹೇಳಿದೆ.

2020–21ನೇ ಹಣಕಾಸು ವರ್ಷದಲ್ಲಿ ಕಂಪನಿಯ ಒಟ್ಟಾರೆ ವಹಿವಾಟು ಮೊತ್ತವು ₹ 13,818 ಕೋಟಿಗಳಷ್ಟು ಇತ್ತು.

ಆತ್ಮನಿರ್ಭರ ಭಾರತ ಗುರಿ ಸಾಧನೆಯು ಮಹತ್ವವನ್ನು ಅರಿತಿದ್ದೇವೆ. ಭಾರತದಲ್ಲಿಯೇ ತಯಾರಿಸಿ, ಆಮದು ಪರ್ಯಾಯದಂತಹ ಉತ್ತೇಜನ ಕ್ರಮಗಳ ಮೂಲಕ ಸ್ವಾವಲಂಬನೆ ಸಾಧಿಸುವತ್ತ ಕಂಪನಿಯು ಹೆಚ್ಚಿನ ಶ್ರಮವಹಿಸಲಿದೆ ಎಂದು ಬಿಇಎಲ್‌ ಅಧ್ಯಕ್ಷ ಆನಂದಿ ರಾಮಲಿಂಗಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT