ಬೆಂಗಳೂರು: ರಕ್ಷಣಾ ಇಲಾಖೆಯ ಮಿನಿರತ್ನ ಕಂಪನಿಯಾಗಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ತನ್ನ ಬೆಂಗಳೂರು ತಯಾರಿಕಾ ಘಟಕದಲ್ಲಿ ಮುಂಬೈನ ಮೆಟ್ರೊ (ಎಂಎಂಆರ್ಡಿಎ) ಯೋಜನೆಗೆ ಬೋಗಿಗಳನ್ನು ತಯಾರಿಸುವುದಕ್ಕೆ ಚಾಲನೆ ನೀಡಿದೆ.

‘ನಿಗದಿತ ಕಾಲಮಿತಿ ಒಳಗೆ ‘ಎಂಎಂಆರ್ಡಿಎ’ಗೆ ಬೋಗಿಗಳನ್ನು ಪೂರೈಸಲು ಬಿಇಎಂಎಲ್ ಬದ್ಧವಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಕುಮಾರ್ ಹೋಟಾ ಹೇಳಿದ್ದಾರೆ.

ಬಿಇಎಂಎಲ್, ಈ ಮೊದಲೇ ‘ಎಂಎಂಆರ್ಡಿಎ’ನ ಕಾರಿಡಾರ್ 2 ಮತ್ತು 7ಕ್ಕೆ 378 ಮೆಟ್ರೊ ಬೋಗಿಗಳನ್ನು ಪೂರೈಸುವ ₹ 3,015 ಕೋಟಿಯ ಗುತ್ತಿಗೆಯನ್ನು ಪಡೆದುಕೊಂಡಿದೆ.

‘ಪ್ರತಿಯೊಂದು ಬೋಗಿಯು 300 ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿರಲಿದೆ’ ಎಂದು ಹೋಟಾ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.