ಗುರುವಾರ , ನವೆಂಬರ್ 21, 2019
23 °C

ಭಾರತ್‌–22 ಇಟಿಎಫ್‌: 4ನೇ ಕಂತು

Published:
Updated:

ನವದೆಹಲಿ: ಕೇಂದ್ರೋದ್ಯಮಗಳ ಭಾರತ್‌–22  ಇಟಿಎಫ್‌ನ ನಾಲ್ಕನೇ ಕಂತನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಮೂರನೇ ಕಂತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಐಸಿಐಸಿಐ ಪ್ರ್ಯುಡೆನ್ಶಿಯಲ್‌ ಮ್ಯೂಚುವಲ್‌ ಫಂಡ್‌ ತನ್ನ ಕರಡು ಪ್ರತಿಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ.

ಭಾರತ್‌–22 ಇಟಿಎಫ್‌ನಲ್ಲಿ ಮುಖ್ಯವಾಗಿ ಒಎನ್‌ಜಿಸಿ, ಐಒಸಿ, ಎಸ್‌ಬಿಐ, ಬಿಪಿಸಿಎಲ್‌, ಕೋಲ್‌ ಇಂಡಿಯಾ ಮತ್ತು ನ್ಯಾಲ್ಕೊ ಕಂಪನಿಗಳಿವೆ.

ಪ್ರತಿಕ್ರಿಯಿಸಿ (+)