ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಚೀನಾಕ್ಕೆ ಸುಂಕದ ಬಿಸಿ

Published 15 ಮೇ 2024, 16:00 IST
Last Updated 15 ಮೇ 2024, 16:00 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾದ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ, ಸ್ಟೀಲ್‌, ಸೌರ ಫಲಕ ಹಾಗೂ ಅಲ್ಯೂಮಿನಿಯಂ ವಸ್ತುಗಳಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರವು ಹೆಚ್ಚಿನ ಆಮದು ಸುಂಕ ವಿಧಿಸಿದೆ.

ಎಲೆಕ್ಟ್ರಿಕ್‌ ವಾಹನಗಳಿಗೆ ಶೇ 100ರಷ್ಟು, ಸೆಮಿಕಂಡಕ್ಟರ್‌ಗಳಿಗೆ ಶೇ 50ರಷ್ಟು ಹಾಗೂ ಎಲೆಕ್ಟ್ರಿಕ್ ವಾಹನದ ಬ್ಯಾಟರಿಗಳ ಮೇಲೆ ಶೇ 25ರಷ್ಟು ಆಮದು ಸುಂಕ ಹೇರಲಾಗಿದೆ. 

‘ನ್ಯಾಯಬದ್ಧವಲ್ಲದ ವ್ಯಾಪಾರದ ರೂಢಿಯಿಂದ ಅಮೆರಿಕದ ಕಾರ್ಮಿಕರನ್ನು ರಕ್ಷಿಸಬೇಕಿದೆ. ಹಾಗಾಗಿ, ಈ ಕ್ರಮ ಕೈಗೊಳ್ಳಲಾಗಿದೆ. ನನ್ನದು ಚೀನಾದೊಟ್ಟಿಗೆ ನ್ಯಾಯೋಚಿತವಾದ ಸ್ಪರ್ಧೆಯಾಗಿದೆ. ಇದು ಸಂಘರ್ಷವಲ್ಲ’ ಎಂದು ಬೈಡನ್‌ ಹೇಳಿದ್ದಾರೆ.‌

‘21ನೇ ಶತಮಾನದಲ್ಲಿ ಚೀನಾ ವಿರುದ್ಧದ ವಾಣಿಜ್ಯ ಸ್ಪರ್ಧೆಯಲ್ಲಿ ನಾವು ಇತರೆ ರಾಷ್ಟ್ರಗಳಿಗಿಂತ ಬಲಿಷ್ಠವಾಗಿದ್ದೇವೆ. ಅಮೆರಿಕದಲ್ಲಿಯೇ ನಾವು ಹೂಡಿಕೆ ಮಾಡುತ್ತಿರುವುದರಿಂದ ಇದು ಕಾರ್ಯಸಾಧ್ಯವಾಗಿದೆ’ ಎಂದು ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT