ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಜಾರ್‌ನಿಂದ ಉಚಿತ ಷಾಪಿಂಗ್‌ ಕೊಡುಗೆ

Last Updated 29 ಸೆಪ್ಟೆಂಬರ್ 2018, 19:51 IST
ಅಕ್ಷರ ಗಾತ್ರ

ಬೆಂಗಳೂರು: ಚಿಲ್ಲರೆ ಮಾರಾಟ ಮಳಿಗೆ ಬಿಗ್ ಬಜಾರ್‌, ಶನಿವಾರದಿಂದ ಅಕ್ಟೋಬರ್‌ 3ರವರೆಗೆ ಉಚಿತ ಷಾಪಿಂಗ್‌ ಕೊಡುಗೆ ಪ್ರಕಟಿಸಿದೆ.

5 ದಿನಗಳ ಬಿಜ್‌ ಬಜಾರ್‌ ಪಬ್ಲಿಕ್‌ ಹಾಲಿಡೇ ಸೇಲ್‌ನಲ್ಲಿ ₹ 4 ಸಾವಿರ ಮೊತ್ತದ ವಸ್ತುಗಳನ್ನು ಖರೀದಿಸಿದರೆ, ಕ್ಯಾಷ್‌ಬ್ಯಾಕ್‌ ಮತ್ತು ವೋಚರ್‌ ರೂಪದಲ್ಲಿ ಅಷ್ಟೇ ಮೊತ್ತ ಮರಳಿ ಸಿಗಲಿದೆ.

ದೇಶದಾದ್ಯಂತ 142 ನಗರಗಳಲ್ಲಿ ಬಿಗ್‌ ಬಜಾರ್‌, ಫುಡ್‌ ಬಜಾರ್‌, ಎಫ್‌ಬಿಬಿ ಮತ್ತು ಹೈಪರ್‌ಸಿಟಿಯ 353 ಮಳಿಗೆಗಳಲ್ಲಿ ಈ ಕೊಡುಗೆ ಲಭ್ಯವಿರಲಿದೆ. ದಿನಸಿ, ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಆಕರ್ಷಕ ವಿನಾಯ್ತಿ ನೀಡಲಿದೆ.

‘ಎಚ್‌ಡಿಎಫ್‌ಸಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸಿ, ₹ 3,500 ಮತ್ತು ಅದಕ್ಕೂ ಹೆಚ್ಚಿನ ಮೊತ್ತದ ಖರೀದಿ ಮಾಡಿದರೆ ಹೆಚ್ಚುವರಿಯಾಗಿ ಶೇ 7 ರಷ್ಟು ರಿಯಾಯ್ತಿ ಸಿಗಲಿದೆ’ ಎಂದು ಬಿಗ್‌ ಬಜಾರ್ ಸಿಇಒ ಸದಾಶಿವ್‌ ನಾಯಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT