ಭಾನುವಾರ, ಆಗಸ್ಟ್ 25, 2019
28 °C

ಬಿಗ್‌ ಬಜಾರ್‌ : ನಾಳೆಯಿಂದ 'ಮಹಾ ಉಳಿತಾಯ’ ಮಾರಾಟ

Published:
Updated:

ಬೆಂಗಳೂರು: ಫ್ಯೂಚರ್‌ ಗ್ರೂಪ್‌ನ ಸರಣಿ ರಿಟೇಲ್‌ ಮಳಿಗೆ ‘ಬಿಗ್‌ ಬಜಾರ್‌’ನ 6 ದಿನಗಳ ಮಹಾ ಉಳಿತಾಯ ಮಾರಾಟ ಉತ್ಸವ ಇದೇ 10 ರಿಂದ 15ರವರೆಗೆ ನಡೆಯಲಿದೆ.

ದೇಶದಾದ್ಯಂತ ಇರುವ ಬಿಗ್‌ ಬಜಾರ್‌ ಮಳಿಗೆಗಳಲ್ಲಿ ಈ ವಿಶೇಷ ಮಾರಾಟ ಉತ್ಸವ ನಡೆಯಲಿದೆ. ಫರ್ನಿಷಿಂಗ್‌ ವಿಭಾಗದಲ್ಲಿ ಗರಿಷ್ಠ ಶೇ 60ರವರೆಗೆ ರಿಯಾಯ್ತಿ, ಶೇ 20ರಷ್ಟು ಹಣ ಮರು ಪಾವತಿ ಕೊಡುಗೆ ಇರಲಿದೆ. ಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಗೃಹೋಪಯೋಗಿ ಸಲಕರಣೆ, ಆಹಾರ, ದವಸ ಧಾನ್ಯ, ಫ್ಯಾಷನ್‌ ವಸ್ತ್ರ, ಗೃಹ ಅಲಂಕಾರ ಸರಕುಗಳು ಅಗ್ಗದ ದರ ಮತ್ತು ರಿಯಾಯ್ತಿ ಕೊಡುಗೆಯಲ್ಲಿ ದೊರೆಯಲಿವೆ.

‘ನಮ್ಮೆಲ್ಲ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಉಳಿತಾಯ ಮಾಡಲು ಈ ಉತ್ಸವ ನೆರವಾಗಲಿದೆ’ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ಹೇಳಿದ್ದಾರೆ.

Post Comments (+)