ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಟಿವಿ: ಅದಾನಿ ಸಮೂಹದ ಬಳಿ ಅತಿಹೆಚ್ಚಿನ ಷೇರು

Last Updated 5 ಡಿಸೆಂಬರ್ 2022, 15:51 IST
ಅಕ್ಷರ ಗಾತ್ರ

ಬೆಂಗಳೂರು: ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಈಗ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ (ಎನ್‌ಡಿಟಿವಿ) ಶೇಕಡ 37ರಷ್ಟು ಷೇರುಗಳನ್ನು ತನ್ನದಾಗಿಸಿಕೊಂಡಿದೆ. ಈಗ ಎನ್‌ಡಿಟಿವಿಯಲ್ಲಿ ಅತಿಹೆಚ್ಚಿನ ಷೇರುಪಾಲು ಅದಾನಿ ಸಮೂಹದ ಬಳಿ ಇದೆ.

ಷೇರು ಮಾರುಕಟ್ಟೆಯಿಂದ ಒಟ್ಟು ಶೇ 26ರಷ್ಟು ಷೇರುಗಳನ್ನು ಖರೀದಿಸುವ ಉದ್ದೇಶವನ್ನು ಸಮೂಹ ಹೊಂದಿತ್ತು. ಆದರೆ ಶೇ 8.3ರಷ್ಟು ಷೇರುಗಳು ಮಾತ್ರ ಅದಕ್ಕೆ ಸಿಕ್ಕಿವೆ. ಹಿಂದಿನ ವಾರ ಸಮೂಹವು ಎನ್‌ಡಿಟಿವಿಯ ಶೇ 29.2ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಕಂಪನಿಯ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಲ್ಲಿ ಒಟ್ಟು ಶೇ 32.3ರಷ್ಟು ಷೇರುಗಳು ಇವೆ.

ಅದಾನಿ ಸಮೂಹವು ಸೋಮವಾರಕ್ಕೆ ಕೊನೆಗೊಂಡ ಓಪನ್ ಆಫರ್ ಮೂಲಕ 7.06 ಲಕ್ಷ ಷೇರುಗಳನ್ನು ಖರೀದಿಸಿದೆ. ‘ಈಗ ಅದಾನಿ ಸಮೂಹವು ಎನ್‌ಡಿಟಿವಿಯ ಅತಿದೊಡ್ಡ ಷೇರುದಾರ ಆಗಿದೆ. ಇಷ್ಟು ಪಾಲು ಹೊಂದಿದ ನಂತರ ಸಮೂಹವು ಎನ್‌ಡಿಟಿವಿ ಆಡಳಿತ ಮಂಡಳಿಯನ್ನು ಪುನರ್ ರಚಿಸಲು ಮುಂದಾಗಬಹುದು. ಮಂಡಳಿಯಲ್ಲಿ ತಮ್ಮ ಕಡೆಯ ನಿರ್ದೇಶಕರು ಇರಬೇಕು, ಈಗಿನ ಕೆಲವರು ಹೊರನಡೆಯಬೇಕು ಎಂಬ ಪ್ರಸ್ತಾವ ಇರಿಸಬಹುದು’ ಎಂದು ಇನ್‌ಗವರ್ನ್ ರಿಸರ್ಚ್‌ ಸರ್ವಿಸಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀರಾಮ್ ಸುಬ್ರಮಣಿಯನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT