ಸೋಮವಾರ, ಜುಲೈ 26, 2021
26 °C

ಖಾಸಗೀಕರಣಕ್ಕೆ ವಿರೋಧ: 10ರಂದು ಬಿಎಂಎಸ್‌ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಇದೇ 10ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ನಿರ್ಧರಿಸಿದೆ.

ಸರ್ಕಾರ ನಡೆಸಲು ಬೇಕಾಗಿರುವ ಹಣಕ್ಕಾಗಿ ಕೇಂದ್ರೋದ್ಯಮಗಳನ್ನು ಖಾಸಗೀಕರಣಗೊಳಿಸುವ ಧಾವಂತವನ್ನು ತೋರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಲ್ಲಿದ್ದಲು ವಲಯಗಳ ಖಾಸಗೀಕರಣ, ರೈಲ್ವೆಯಲ್ಲಿನ ಷೇರುಗಳ ಮಾರಾಟ, ಬ್ಯಾಂಕ್‌, ವಿಮೆಯಲ್ಲಿ ವಿಲೀನ ಮತ್ತು ಖಾಸಗೀಕರಣ ಹಾಗೂ ಎಫ್‌ಡಿಐ ಮಿತಿ ಹೆಚ್ಚಳದಂತಹ ನಿರ್ಧಾರಗಳ ವಿರುದ್ಧ ಈ ಪ್ರತಿಭಟನೆ ನಡೆಸಲು ಬಿಎಂಎಸ್‌ ನಿರ್ಧರಿಸಿದೆ.

ದೇಶದ ಆಸ್ತಿಯನ್ನು ಮಾರಾಟ ಮಾಡುವ ನೌತಿಕ ಹಕ್ಕು ಅಥವಾ ಅಧಿಕಾರ ಸರ್ಕಾರಕ್ಕೆ ಇಲ್ಲ. ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನಿರ್ಧಾರಗಳನ್ನು ಕೈಬಿಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದೆ.

ಬುಧವಾರ ಮತ್ತು ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು