ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಯಮತ್ತೂರಲ್ಲಿ ಮಳಿಗೆ ಉದ್ಘಾಟಿಸಿದ ಬಿಎನ್‌ಸಿ ಮೋಟರ್‌

Published 25 ಮೇ 2024, 15:07 IST
Last Updated 25 ಮೇ 2024, 15:07 IST
ಅಕ್ಷರ ಗಾತ್ರ

ಚೆನ್ನೈ: ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಕ ಬಿಎನ್‌ಸಿ ಮೋಟರ್ಸ್‌ ಕೊಯಮತ್ತೂರಲ್ಲಿ ತನ್ನ ಎರಡನೇ ಮಳಿಗೆ ಉದ್ಘಾಟಿಸಿದೆ.

ಕೊಯಮತ್ತೂರು ಮೂಲದ ಬಿಎನ್‌ಸಿ ಮೋಟರ್ಸ್‌ ದೇಶದ ದಕ್ಷಿಣ ಭಾಗದಲ್ಲಿ 15ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ ಎಂದು ಕಂಪನಿಯ ಸಿಇಒ ಅನಿರುದ್ಧ್‌ ರವಿ ನಾರಾಯಣ್‌ ತಿಳಿಸಿದ್ದಾರೆ. 

‘ನಮ್ಮ ತವರು ನಗರವಾದ ಕೊಯಮತ್ತೂರಿನಲ್ಲಿ ನಮ್ಮ ಎರಡನೇ ಮಳಿಗೆ ಪ್ರಾರಂಭ ಮಾಡುತ್ತಿರುವುದು ಸಂತಸ ತಂದಿದೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದು ತಿಳಿಸಿದ್ದಾರೆ.

ಶೋರೂಂ ಉದ್ಘಾಟನೆಯ ಕಾರಣಕ್ಕೆ ತನ್ನ ದ್ವಿಚಕ್ರ ವಾಹನಗಳಾದ ಚಾಲೆಂಜರ್‌ ಎಸ್‌ 110 ಮತ್ತು ಚಾಲೆಂಜರ್‌ ಎಸ್‌ 125 ಮಾದರಿಗಳನ್ನು ಕ್ರಮವಾಗಿ ₹99,900 ಮತ್ತು ₹1.45 ಲಕ್ಷಕ್ಕೆ ನೀಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT