ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷ್‌: 10 ದಿನ ಉತ್ಪಾದನೆ ಸ್ಥಗಿತ

Last Updated 4 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ವಾಹನ ಬಿಡಿಭಾಗ ತಯಾರಿಸುವ ಪ್ರಮುಖ ಕಂಪನಿಯಾಗಿರುವ ಬಾಷ್‌, ಮೂರನೆ ತ್ರೈಮಾಸಿಕ
ದಲ್ಲಿ ಪ್ರತಿ ತಿಂಗಳೂ 10 ದಿನಗಳವರೆಗೆ ತಯಾರಿಕೆ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಯಾರಿಕೆ ಹೊಂದಿಸಲು ತನ್ನ ವಿವಿಧ ಘಟಕಗಳಲ್ಲಿನ ಪವರ್‌ಟ್ರೇನ್‌ ಸೊಲುಷನ್ಸ್‌ ವಿಭಾಗದಲ್ಲಿನ ತಯಾರಿಕೆಯನ್ನು ಸ್ಥಗಿತಗೊಳಿಸಲು ಈ ನಿರ್ಧಾರ ಕೈಗೊಂಡಿದೆ.

ಅನಗತ್ಯವಾಗಿ ದಾಸ್ತಾನು ಹೆಚ್ಚಳಕ್ಕೆ ಕಡಿವಾಣ ಹಾಕಲು ಕಂಪನಿಯು ಆಗಸ್ಟ್ ತಿಂಗಳಿನಲ್ಲಿಯೂ ತನ್ನ ಎರಡು ಘಟಕಗಳಲ್ಲಿ 13 ದಿನಗಳವರೆಗೆ ತಾತ್ಕಾಲಿಕವಾಗಿ ತಯಾರಿಕೆ ಚಟುವಟಿಕೆ ಸ್ಥಗಿತಗೊಳಿಸಿತ್ತು.

ಅಶೋಕ್‌ ಲೇಲ್ಯಾಂಡ್‌ 15 ದಿನ ತಯಾರಿಕೆ ಸ್ಥಗಿತ

ವಾಣಿಜ್ಯ ವಾಹನ ತಯಾರಿಕಾ ಕಂಪನಿ ಅಶೋಕ್‌ ಲೇಲ್ಯಾಂಡ್‌, ಅಕ್ಟೋಬರ್‌ ತಿಂಗಳಲ್ಲಿ ತನ್ನ ವಿವಿಧ ಘಟಕಗಳಲ್ಲಿ 15 ದಿನಗಳವರೆಗೆ ತಯಾರಿಕೆ ಚಟುವಟಿಕೆ ನಿಲ್ಲಿಸುವುದಾಗಿ ಪ್ರಕಟಿಸಿದೆ.

ಮಾರಾಟಕ್ಕೆ ಪೂರಕವಾಗಿ ತಯಾರಿಕೆಯನ್ನು 2ರಿಂದ 15 ದಿನಗಳವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ವಾಹನಗಳ ಮಾರಾಟ ಕುಸಿದಿರುವುದರಿಂದ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ. ಹಿಂದಿನ ತಿಂಗಳೂ ಇಂತಹದೇ ನಿರ್ಧಾರ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT