ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಪೆಟ್ರೋಲಿಯಂನಿಂದ ಧ್ವನಿ ಆಧಾರಿತ ಎಲ್‌ಪಿಜಿ ಬುಕಿಂಗ್‌, ಪಾವತಿ ಸೌಲಭ್ಯ

Last Updated 17 ಮಾರ್ಚ್ 2022, 13:36 IST
ಅಕ್ಷರ ಗಾತ್ರ

ನವದೆಹಲಿ: ಇಂಟರ್ನೆಟ್ ಸಂಪ‌ರ್ಕವಿಲ್ಲದ ಫೋನ್‌ ಬಳಸುವ ಗ್ರಾಹಕರ ಅನುಕೂಲಕ್ಕಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಧ್ವನಿ ಆಧಾರಿತ ಎಲ್‌ಪಿಜಿ ಬುಕಿಂಗ್‌ ಮತ್ತು ಪಾವತಿ ಸೌಲಭ್ಯಕ್ಕೆ ಗುರುವಾರ ಚಾಲನೆ ನೀಡಿದೆ.

ಇದಕ್ಕಾಗಿ ಅಲ್ಟ್ರಾಕ್ಯಾಷ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ‘ಯುಪಿಐ 123ಪೇ’ ಮೂಲಕ ಗ್ರಾಹಕರು ಹಣ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದೆ. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ‘ಯುಪಿಐ 123ಪೇ’ ಸೇವೆಗೆ ಕಳೆದ ವಾರವಷ್ಟೇ ಚಾಲನೆ ನೀಡಿದ್ದರು.

ಭಾರತ್‌ ಗ್ಯಾಸ್‌ ಗ್ರಾಹಕರು 080–4516–3554 ಸಂಖ್ಯೆಗೆ ಕರೆ ಮಾಡಿ ಗ್ಯಾಸ್‌ ಬುಕ್‌ ಮಾಡಬಹುದು ಮತ್ತು ಸುರಕ್ಷಿತವಾಗಿ ಹಣ ಪಾವತಿಸಬಹುದು ಎಂದು ಕಂಪನಿ ಹೇಳಿದೆ. ಗ್ರಾಮೀಣ ಭಾಗದಲ್ಲಿ ಇರುವ ಸುಮಾರು ನಾಲ್ಕು ಕೋಟಿ ಗ್ರಾಹಕರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT