ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ನಿಂದ ಬಿಎಸ್‌ಎನ್‌ಎಲ್‌ 4ಜಿ ಸೇವೆ

Last Updated 3 ಅಕ್ಟೋಬರ್ 2022, 13:37 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಬಿಎಸ್‌ಎನ್‌ಎಲ್ ಕಂಪನಿಯು ನವೆಂಬರ್‌ ತಿಂಗಳಿನಿಂದ 4ಜಿ ಸೇವೆಗಳನ್ನು ಆರಂಭಿಸಲಿದೆ. ಮುಂದಿನ ವರ್ಷದ ಆಗಸ್ಟ್‌ಗೆ ಮೊದಲು ಸೇವೆಗಳನ್ನು ಹಂತ ಹಂತವಾಗಿ 5ಜಿಗೆ ಪರಿವರ್ತಿಸಲಿದೆ.

‘ದೇಶೀಯವಾಗಿ ಅಭಿವೃದ್ಧಿಪಡಿಸಿದ 4ಜಿ ತಂತ್ರಜ್ಞಾನವನ್ನು ಅಳವಡಿಸಲು ಐ.ಟಿ. ಸೇವಾ ಕಂಪನಿ ಟಿಸಿಎಸ್, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ಸಿ–ಡಾಟ್ ನೇತೃತ್ವದ ಸಂಸ್ಥೆಗಳ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಬಿಎಸ್‌ಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರವಾರ್ ತಿಳಿಸಿದ್ದಾರೆ.

‘ನಾವು ಖರೀದಿಸುತ್ತಿರುವ 4ಜಿ ಉಪಕರಣಗಳ ಸಾಫ್ಟ್‌ವೇರ್‌ ಮೇಲ್ದರ್ಜೆಗೆ ಏರಿಸುವ ಮೂಲಕ 5ಜಿ ಸೇವೆಗಳನ್ನು ಆರಂಭಿಸಲು ಆಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

‘ನಮ್ಮ ಕಂಪನಿಯು 2023ರ ಆಗಸ್ಟ್‌ 15ರ ವೇಳೆಗೆ 5ಜಿ ಸೇವೆ ಹೊಂದಿರಬೇಕು ಎಂದು ಕೇಂದ್ರವು ನಮಗೆ ಹೇಳಿದೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT