ಭಾನುವಾರ, ಮಾರ್ಚ್ 29, 2020
19 °C

ಬ್ಯಾಡಗಿ ಮೆಣಸಿನಕಾಯಿ ಆವಕ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 1,21,644 ಚೀಲ (36,493 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿದ್ದು ಪ್ರಸಕ್ತ ಹಂಗಾಮಿನಲ್ಲಿಯೇ ಅತೀ ಹೆಚ್ಚು ಆವಕವೆಂದು ದಾಖಲಾಗಿದೆ.

ಅತಿವೃಷ್ಟಿಯಿಂದ ಮೆಣಸಿನಕಾಯಿ ಬೆಳೆ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ಒಂದೇ ದಿನ 1 ಲಕ್ಷ ಚೀಲಗಳಿಗಿಂತ ಹೆಚ್ಚು ಬಂದಿರಲಿಲ್ಲ. ಶಿವರಾತ್ರಿ ಬಳಿಕ ಆವಕದಲ್ಲಿ ಗಣನೀಯ ಪ್ರಮಾಣ
ದಲ್ಲಿ ಏರಿಕೆಯಾಗಿದ್ದರಿಂದ ಇಲ್ಲಿಯ ವರ್ತಕರಲ್ಲಿ ಮಂದಹಾಸ ಮೂಡಿದೆ.

ಸೋಮವಾರದ ಆವಕದಲ್ಲಿ ಗುಂಟೂರು ತಳಿ ಶೇ 50 ರಷ್ಟಿದೆ. ಬ್ಯಾಡಗಿ ಕಡ್ಡಿ ಮತ್ತು ಡಬ್ಬಿ ಮೆಣಸಿನಕಾಯಿ ಕ್ರಮವಾಗಿ ಶೇ 30 ಹಾಗೂ ಶೇ 20 ರಷ್ಟಿದೆ.

‘ಕಳೆದ ವರ್ಷದ ಫೆಬ್ರುವರಿಯಲ್ಲಿ  3,10,316 ಚೀಲ ಮೆಣಸಿನಕಾಯಿ ಮಾರುಕಟ್ಟೆಗೆ ಬಂದಿತ್ತು. ಪ್ರಸಕ್ತ ದರ ಹೆಚ್ಚಿದ್ದರೂ ಆವಕದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ’ ಎಂದು ಎಪಿಎಂಸಿಯ ಪ್ರಭು ದೊಡ್ಡಮನಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು