ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ನೌಕರರನ್ನು ವಜಾಗೊಳಿಸಿದ ಬೈಜುಸ್

Last Updated 30 ಜೂನ್ 2022, 11:25 IST
ಅಕ್ಷರ ಗಾತ್ರ

ನವದೆಹಲಿ: ವೈಟ್‌ಹ್ಯಾಟ್‌ ಜೆಆರ್‌ ಹಾಗೂ ಟಾಪರ್‌ ಕಂಪನಿಗಳಲ್ಲಿ ಒಟ್ಟು 500ಕ್ಕಿಂತ ಕಡಿಮೆ ಸಂಖ್ಯೆಯ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಈ ಕಂಪನಿಗಳ ಮಾತೃಸಂಸ್ಥೆ ಬೈಜುಸ್ ಕಂಪನಿ ಹೇಳಿದೆ. ಆದರೆ, ವಜಾ ಮಾಡಲಾದ ನೌಕರರ ಸಂಖ್ಯೆಯು 1,100 ಎಂದು ಕೆಲಸ ಕಳೆದುಕೊಂಡ ಕೆಲವರು ಹೇಳಿದ್ದಾರೆ.

ಬೈಜುಸ್ ಸಮೂಹಕ್ಕೆ ಸೇರಿದ ವೈಟ್‌ಹ್ಯಾಟ್‌ ಜೆಎಆರ್‌ ಕಂಪನಿಯಿಂದ 300 ನೌಕರರನ್ನು ವಜಾ ಮಾಡಲಾಗಿದೆ. ‘ನಮ್ಮ ಆದ್ಯತೆಗಳನ್ನು ಮರುಹೊಂದಿಸಿಕೊಳ್ಳಲು, ದೀರ್ಘಾವಧಿಯ ಬೆಳವಣಿಗೆ ಗುರಿಗೆ ವೇಗ ನೀಡಲು ನಮ್ಮ ತಂಡಗಳನ್ನು ಇನ್ನಷ್ಟು ಉತ್ತಮಪಡಿಸುತ್ತಿದ್ದೇವೆ. ಇಡೀ ಪ್ರಕ್ರಿಯೆಯು 500ಕ್ಕೂ ಕಡಿಮೆ ನೌಕರರಿಗೆ ಸಂಬಂಧಿಸಿದೆ’ ಎಂದು ಬೈಜುಸ್‌ ವಕ್ತಾರರು ಹೇಳಿದ್ದಾರೆ.

ತಮಗೆ ಸೋಮವಾರ ಕರೆ ಬಂತು, ರಾಜೀನಾಮೆ ಕೊಡುವಂತೆ ತಿಳಿಸಲಾಯಿತು ಎಂದು ಟಾಪ್‌ಆರ್‌ ಕಂಪನಿಯ ನೌಕರರು ತಿಳಿಸಿದ್ದಾರೆ. ರಾಜೀನಾಮೆ ನೀಡದಿದ್ದರೆ ನೋಟಿಸ್ ಅವಧಿ ಇಲ್ಲದೆಯೇ ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಹೇಳಲಾಯಿತು ಎಂದಿದ್ದಾರೆ.

‘ರಾಜೀನಾಮೆ ಕೊಟ್ಟವರಿಗೆ ಒಂದು ತಿಂಗಳ ವೇತನ ನೀಡಲಾಗುವುದು ಎಂಬ ಭರವಸೆ ಕೊಡಲಾಗಿದೆ. ರಾಜೀನಾಮೆ ಕೊಡದಿದ್ದರೆ ಅದೂ ಇಲ್ಲ. ಟಾಪರ್‌ನಲ್ಲಿ ಅಂದಾಜು 1,100 ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ’ ಎಂದು ಅಲ್ಲಿನ ನೌಕರರೊಬ್ಬರು ತಿಳಿಸಿದ್ದಾರೆ.

ಈ ವಿಚಾರವಾಗಿ ಟಾಪರ್‌ ಸಹಸಂಸ್ಥಾಪಕ ಜೀಶನ್‌ ಹಯಾತ್ ಅವರಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಕಂಪನಿಯಲ್ಲಿ ನೌಕರರಿಗೆ ಬೆಳವಣಿಗೆಗೆ ಹೆಚ್ಚಿನ ಅವಕಾಶಗಳಿವೆ ಎಂದು ಹಯಾತ್ ಸೇರಿದಂತೆ ಹಲವಾರು ಹಿರಿಯರಿಂದ ಭರವಸೆ ಸಿಕ್ಕಿತ್ತು. ಆದರೆ, ಆಫ್‌ಲೈನ್‌ ತರಗತಿಗಳು ಶುರುವಾದ ನಂತರದಲ್ಲಿ ಆನ್‌ಲೈನ್‌ ಶಿಕ್ಷಣದ ವಹಿವಾಟು ಕಡಿಮೆ ಆಗಿರುವ ಸೂಚನೆಗಳು ದೊರೆತಿವೆ ಎಂದು ಇನ್ನೊಬ್ಬ ನೌಕರ ಹೇಳಿದರು.

ತಂತ್ರಜ್ಞಾನವನ್ನು ಬಳಸಿಕೊಂಡು ಶಿಕ್ಷಣ ಒದಗಿಸುವ ಕಂಪನಿಗಳಾದ ಅನ್‌ಅಕಾಡೆಮಿ, ವೇದಾಂತು, ಲಿಡೊ, ಫ್ರಂಟ್‌ರೊ ಒಟ್ಟಾರೆ ಸಾವಿರಾರು ನೌಕರರನ್ನು ಈ ವರ್ಷ ವಜಾಗೊಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT