ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ 140 ಸಿಬ್ಬಂದಿ ಸ್ಥಳಾಂತರ ಕೈಬಿಟ್ಟ ಬೈಜುಸ್‌

Last Updated 2 ನವೆಂಬರ್ 2022, 15:55 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವ ಬೈಜುಸ್ ಕಂಪನಿಯು ತನ್ನ ಕೇರಳ ಕಚೇರಿಯಲ್ಲಿನ 140 ಸಿಬ್ಬಂದಿಯನ್ನು ಸ್ಥಳಾಂತರಿಸುವ ನಿರ್ಧಾರ ಹಿಂಪಡೆದಿದೆ.

ಬೈಜುಸ್‌ ಸ್ಥಾಪಕ ಬೈಜು ರವೀಂದ್ರನ್‌ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದು, ರಾಜ್ಯದಲ್ಲಿ 600 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಾಗಿಯೂ ಅವರು ಘೋಷಿಸಿದ್ದಾರೆ.

ವೆಚ್ಚ ತಗ್ಗಿಸುವ ಭಾಗವಾಗಿ, ತಿರುವನಂತಪುರದ ಕಚೇರಿ ಮುಚ್ಚಲು ಯೋಜಿಸಿದ್ದು, ಅದಕ್ಕಾಗಿ ಟಿವಿಎಂ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 140 ಸಿಬ್ಬಂದಿಗೆ ಬೆಂಗಳೂರಿಗೆ ಸ್ಥಳಾಂತರ ಆಗುವಂತೆ ಸೂಚನೆ ನೀಡಿತ್ತು. ಒಂದೊಮ್ಮೆ 12 ತಿಂಗಳಿನಲ್ಲಿ ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗದೇ ಇದ್ದರೆ ಮತ್ತೆ ಬೈಜುಸ್‌ನಲ್ಲಿ ಕೆಲಸ ನೀಡುವ ಭರವಸೆಯನ್ನೂ ಕಂಪನಿ ಈ ಉದ್ಯೋಗಿಗಳಿಗೆ ನೀಡಿತ್ತು.

ಆದರೆ, ಮುಖ್ಯಮಂತ್ರಿಯನ್ನು ಭೇಟಿಯಾದ ಬಳಿಕ ರವೀಂದ್ರನ್‌ ಅವರು ಕೇರಳದಲ್ಲಿ ವಹಿವಾಟು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT