ಶುಕ್ರವಾರ, ಜುಲೈ 1, 2022
28 °C

ಅಂಗಸಂಸ್ಥೆಗಳಿಂದ ಹೂಡಿಕೆ ಹಿಂತೆಗೆತ: ಆಡಳಿತ ಮಂಡಳಿಗೆ ಅಧಿಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಕಂಪನಿಗಳು ತಮ್ಮ ಅಂಗಸಂಸ್ಥೆಗಳನ್ನು ಮುಚ್ಚುವ ಅಥವಾ ಅವುಗಳಲ್ಲಿನ ಬಂಡವಾಳವನ್ನು ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ ತೀರ್ಮಾನವನ್ನು ಆಡಳಿತ ಮಂಡಳಿಗಳ ಮೂಲಕ ಕೈಗೊಳ್ಳಬಹುದು ಎಂದು ಕೇಂದ್ರ ಸಚಿವ ಸಂಪುಟ ಬುಧವಾರ ಹೇಳಿದೆ.

ಈಗಿನ ನಿಯಮಗಳ ಅನ್ವಯ, ಅಂಗಸಂಸ್ಥೆಗಳನ್ನು ಮುಚ್ಚಲು ಅಥವಾ ಅವುಗಳಲ್ಲಿನ ಬಂಡವಾಳ ಹಿಂತೆಗೆದುಕೊಳ್ಳಲು ಸಚಿವ ಸಂಪುಟದ ಅನುಮೋದನೆ ಬೇಕಿದೆ.

ಹೂಡಿಕೆ ಹಿಂತೆಗೆತ ಹಾಗೂ ಕಂಪನಿಯನ್ನು ಮುಚ್ಚುವ ಪ್ರಕ್ರಿಯೆಯು ಸ್ಪರ್ಧಾತ್ಮಕ ಬಿಡ್ಡಿಂಗ್ ಮತ್ತು ಕೆಲವು ಮಾರ್ಗಸೂಚಿಗಳನ್ನು ಆಧರಿಸಿ ನಡೆಯಬೇಕು. ಮಾರ್ಗಸೂಚಿಗಳನ್ನು ಇನ್ನಷ್ಟೇ ಹೊರಡಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು