ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆಗಳು ಎಂಜಿನ್‌ ಆಗಿವೆ: ಉದಯ್‌ ಕೋಟಕ್

Last Updated 6 ಏಪ್ರಿಲ್ 2021, 15:08 IST
ಅಕ್ಷರ ಗಾತ್ರ

ನವದೆಹಲಿ: ‘ಭಾರತದ ಬೆಳವಣಿಗೆಗೆ ಬಂಡವಾಳ ಮಾರುಕಟ್ಟೆಗಳು ಎಂಜಿನ್‌ ಆಗಿವೆ. ಇವುಗಳನ್ನು ಪೋಷಿಸುವ ಬಗ್ಗೆ ನೀತಿ ನಿರೂಪಕರು ಗಮನ ಹರಿಸಬೇಕು’ ಎಂದು ಭಾbusರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ಉದಯ್ ಕೋಟಕ್‌ ಹೇಳಿದ್ದಾರೆ.

‘ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ಬಂಡವಾಳ ಮಾರುಕಟ್ಟೆಗಳು ಆರ್ಥಿಕತೆಗೆ ಬೆಂಬಲ ನೀಡಿವೆ. ಕಾರ್ಪೊರೇಟ್‌ ಸಂಸ್ಥೆಗಳ ಪೋಷಣೆಗೆ ಅಗತ್ಯ ಇರುವಷ್ಟು ಬಂಡವಾಳ ಸಂಗ್ರಹಿಸಲು ನೆರವಾಗಿವೆ’ ಎಂದು ಅವರು ತಿಳಿಸಿದ್ದಾರೆ.

‘ಬಂಡವಾಳ ಮಾರುಕಟ್ಟೆ ಪ್ರವೇಶಿಸಲು ಕಂಪನಿಗಳು ಕಾರ್ಪೊರೇಟ್‌ ಆಡಳಿತದ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಏಕೆಂದರೆ ಮಾರುಕಟ್ಟೆಯು ಬಂಡವಾಳ ಸಂಗ್ರಹಿಸಲು ಸಹಾಯ ಮಾಡುತ್ತದೆ. ಉದ್ಯಮಗಳ ಯಶಸ್ಸು ಮತ್ತು ವೈಫಲ್ಯವನ್ನು ಈಗ ಕಾರ್ಪೊರೇಟ್‌ ಆಡಳಿತವು ನಿರ್ಧರಿಸುತ್ತದೆ’ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಸಿಇಒ ಕೇಕಿ ಮಿಸ್ತ್ರಿ, ‘ಜಾಗತಿಕ ಹೂಡಿಕೆದಾರರು ಬಂಡವಾಳ ಹೂಡಿಕೆ ಮಾಡುವಾಗ ಮೊದಲು ಗಮನ ಹರಿಸುವುದೇ ಉತ್ತಮ ಆಡಳಿತದ ಬಗ್ಗೆ. ಎಲ್ಲಿ ಕಾರ್ಪೊರೇಟ್‌ ಆಡಳಿತವು ಉತ್ತಮವಾಗಿದೆ ಎಂದು ಗ್ರಹಿಸುತ್ತಾರೋ ಅಲ್ಲಿ ಅವರು ಹೂಡಿಕೆ ಮಾಡಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT