ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಟೇಟ್‌ ಟ್ಯಾಕ್ಸ್‌ ಮತ್ತೆ ಜಾರಿ?

Last Updated 27 ಜೂನ್ 2019, 16:51 IST
ಅಕ್ಷರ ಗಾತ್ರ

ನವದೆಹಲಿ: ವರಮಾನ ಕೊರತೆ ತುಂಬಿಕೊಳ್ಳಲು ಕೇಂದ್ರ ಸರ್ಕಾರವು ಎಸ್ಟೇಟ್‌ ತೆರಿಗೆಯನ್ನು ಮರಳಿ ಜಾರಿಗೆ ತರುವ ಸಾಧ್ಯತೆ ಇದೆ.

ಕೆಲವೇ ಜನರ ಬಳಿ ಸಂಪತ್ತು ಕೇಂದ್ರೀಕರಣ ಆಗುತ್ತಿರುವುದನ್ನು ತಪ್ಪಿಸುವ ಮತ್ತು ತೆರಿಗೆ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಹೆಸರಿನಲ್ಲಿ ಈ ತೆರಿಗೆ ಪದ್ಧತಿ ಜಾರಿಗೆ ತರುವುದು ಸರ್ಕಾರದ ಚಿಂತನೆಯಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಮೊದಲ ಬಜೆಟ್‌ನಲ್ಲಿ ಈ ಪ್ರಸ್ತಾವ ಮಂಡಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಪಿತ್ರಾರ್ಜಿತ ತೆರಿಗೆಯಿಂದ ಬರುವ ವರಮಾನವನ್ನು ಸಾಮಾಜಿಕ ವಲಯದ ಕಾರ್ಯಕ್ರಮಗಳಿಗೆ ಬಳಸುವ ಉದ್ದೇಶ ಇದೆ.

ಆಸ್ತಿಯ ಮಾಲೀಕ ಮೃತಪಟ್ಟ ನಂತರ ಆತನ ಉತ್ತರಾಧಿಕಾರಿಗೆ ಆಸ್ತಿ ವರ್ಗಾವಣೆ ಆಗುವ ಸಂದರ್ಭದಲ್ಲಿ ಈ ತೆರಿಗೆ ವಿಧಿಸುವ ವ್ಯವಸ್ಥೆ ಇದಾಗಿದೆ. 1985ರಲ್ಲಿ ಇದನ್ನು ರದ್ದುಪಡಿಸಲಾಗಿತ್ತು. ಈ ಹಿಂದೆ ಪಿತ್ರಾರ್ಜಿತ ಆಸ್ತಿ ತೆರಿಗೆ ಪ್ರಮಾಣವು ಶೇ 85ರಷ್ಟಿತ್ತು.

ಹೊಸ ಅವತಾರದಲ್ಲಿ ತೆರಿಗೆ ಪ್ರಮಾಣ ಕಡಿಮೆ ಇರಬಹುದು. ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಶೇ 40ರಷ್ಟಿದೆ. ಫ್ರಾನ್ಸ್‌ನಲ್ಲಿ ಶೇ 5 ರಿಂದ ಶೇ 60ರಷ್ಟಿದೆ. ಇದರ ಮಧ್ಯೆ ಹಲವಾರು ಹಂತಗಳಿವೆ. ಸ್ಪೇನ್‌ನಲ್ಲಿ ಶೇ 34ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT