ಬುಧವಾರ, ಏಪ್ರಿಲ್ 21, 2021
25 °C

ಸಿಎಫ್ ಮೋಟೊ: 4 ಬೈಕ್ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚೀನಾದ ವಾಹನ ತಯಾರಿಕಾ ಕಂಪನಿ ಸಿಎಫ್ ಮೋಟೊ, ಹೊಸ ಪ್ರೀಮಿಯಂ ಬೈಕ್‌ಗಳನ್ನು ಎಎಂಡಬ್ಲ್ಯು ಮೋಟರ್ ಸೈಕಲ್ ಸಹಯೋಗದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

300ಎನ್ ಕೆ, 650ಕೆ, 650ಎಂಟಿ ಮತ್ತು 650ಜಿಟಿ ಹೆಸರಿನ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಈ ಬೈಕ್‌ಗಳನ್ನು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನಾವರಣಗೊಳಿಸಲಾಯಿತು.

‘ಸಿಎಫ್ ಮೋಟೊ ಜತೆಗಿನ ಸಹಭಾಗಿತ್ವದಲ್ಲಿ ಈ ಬೈಕ್‌ಗಳನ್ನು ಭಾರತದಲ್ಲಿ ಪರಿಚಯಿಸಲಾಗುತ್ತಿದೆ’ ಎಂದು ಎಎಂಡಬ್ಲ್ಯು ಮೋಟರ್ ಸೈಕಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಂಶಿ ಕೃಷ್ಣ ಜಗಿನಿ ಹೇಳಿದರು. 300ಎನ್‌ಕೆ ಬೈಕ್‌ ಬೆಲೆ (ಎಕ್ಸ್ ಷೋರೂಂ) ₹ 2.29 ಲಕ್ಷ, 650 ಎನ್‌ಕೆ– ₹ 3.99 ಲಕ್ಷ, 650 ಎಂಟಿ ₹ 4.99 ಲಕ್ಷ ಮತ್ತು 650ಜಿಟಿ ₹ 5.49 ಲಕ್ಷ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.