ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ಮೆಣಸಿನಕಾಯಿ: ಕೆ.ಜಿ.ಗೆ ₹240ಕ್ಕೆ ಮಾರಾಟ

ಸಂತೆಯಲ್ಲಿ ಗಾಬರಿಗೊಂಡ ಗ್ರಾಹಕರು
Last Updated 22 ಮಾರ್ಚ್ 2022, 19:41 IST
ಅಕ್ಷರ ಗಾತ್ರ

ಕೆರೂರ(ಬಾಗಲಕೋಟೆ): ಹಸಿ ಮೆಣಸಿನಕಾಯಿ(ಗಿಡ್ಡ) ದರ ಗಗನಕ್ಕೇರುತ್ತಿದ್ದು, ಮಂಗಳವಾರ ನಡೆಯುವ ಇಲ್ಲಿನ ಸಂತೆಯಲ್ಲಿ ಕೆ.ಜಿ.ಗೆ ₹240ಕ್ಕೆ ಮಾರಾಟವಾಯಿತು. ಬೆಲೆ ಕೇಳಿ ಹೌಹಾರಿದ ಗ್ರಾಹಕರು, ಮಾರಾಟಗಾರರೊಂದಿಗೆ ಚೌಕಾಶಿ ನಡೆಸಿ, ಕೊನೆಗೆ ಉದ್ದ ಮೆಣಸಿನಕಾಯಿ (ದರ ₹100 ಕೆ.ಜಿ) ಖರೀದಿಸಿದರು.

ಆವಕ ಕ್ಷೀಣ: ‘ಮುಂಗಾರು ಹಂಗಾಮಿನಲ್ಲಿ ರೈತರು ಹಸಿ ಮೆಣಸಿನಕಾಯಿ ಬೆಳೆದರೆ, ಹಿಂಗಾರಿನಲ್ಲಿ ಬೆಳೆದ ಬ್ಯಾಡಗಿ ತಳಿಯ ಮೆಣಸಿನಕಾಯಿಯನ್ನು ಒಣಗಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ. ಈ ಭಾಗದ ಬಹುಪಾಲು ಕೃಷಿಕರು ಕಬ್ಬು ಬೆಳೆಗೆ ಒತ್ತು ನೀಡಿದ್ದಾರೆ. ಹೀಗಾಗಿ ಹಸಿ ಮೆಣಸಿನಕಾಯಿಯ ಆವಕ ಕ್ಷೀಣಿಸಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ದಿನ ಕಳೆದಂತೆ ಬೆಲೆ ಹೆಚ್ಚುತ್ತಲೇ ಇದೆ’ ಎನ್ನುತ್ತಾರೆ ರೈತ ಹಾಗೂ ವರ್ತಕ ಮಲ್ಲಿಕಾರ್ಜುನ ಪೂಜಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT