ಬುಧವಾರ, ಮಾರ್ಚ್ 29, 2023
30 °C

ಪೇಟಿಎಂ ಆಡಳಿತ ಮಂಡಳಿಯಿಂದ ಹೊರಬಂದ ಚೀನಾ ಪ್ರಜೆಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಡಿಜಿಟಲ್ ಪಾವತಿ ಸೇವಾ ಕಂಪನಿ ಪೇಟಿಎಂ ಆಡಳಿತ ಮಂಡಳಿಯಲ್ಲಿ ಇದ್ದ ಚೀನಾ ಪ್ರಜೆಗಳೆಲ್ಲ ತಮ್ಮ ಸ್ಥಾನ ತೊರೆದಿದ್ದಾರೆ. ಅವರು ಹೊಂದಿದ್ದ ಸ್ಥಾನಗಳಿಗೆ ಭಾರತ ಹಾಗೂ ಅಮೆರಿಕದ ಪ್ರಜೆಗಳನ್ನು ನೇಮಿಸಲಾಗಿದೆ.

ಅಲಿಪೇ ಪ್ರತಿನಿಧಿ ಜಿಂಗ್‌ ಷಿಯಾನ್‌ಡಾಂಗ್‌, ಆ್ಯಂಟ್‌ ಫೈನಾನ್ಶಿಯಲ್ಸ್‌ನ ಗುವೊಮಿಂಗ್ ಚೆಂಗ್, ಅಲಿಬಾಬಾ ಪ್ರತಿನಿಧಿಗಳಾದ ಮೈಕೇಲ್ ಯುವೆನ್ ಜೆನ್ ಯಾವೊ ಮತ್ತು ಟಿಂಗ್ ಹಾಂಗ್ ಕೆನ್ನಿ ಹೊ ಅವರು ಆಡಳಿತ ಮಂಡಳಿಯಿಂದ ಹೊರಬಂದಿದ್ದಾರೆ ಎಂದು ಕಂಪನಿ ತಿಳಿಸಿದೆ. ಇಷ್ಟು ಜನರ ಪೈಕಿ ಯಾವೊ ಅವರು ಅಮೆರಿಕದ ಪ್ರಜೆ.

ಆ್ಯಂಟ್ ಸಮೂಹದ ಪರವಾಗಿ ಅಮೆರಿಕದ ಪ್ರಜೆ ಡಗ್ಲಾಸ್ ಫೀಜಿನ್ ಅವರು ಆಡಳಿತ ಮಂಡಳಿಗೆ ಪ್ರವೇಶ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾಮ ಕ್ಯಾಪಿಟಲ್ಸ್‌ನ ಅಶಿತ್ ರಂಜಿತ್ ಲಿಲಾನಿ, ಸಾಫ್ಟ್‌ಬ್ಯಾಂಕ್ ಪ್ರತಿನಿಧಿ ವಿಕಾಸ್ ಅಗ್ನಿಹೋತ್ರಿ ಅವರು ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪೇಟಿಎಂ ಕಂಪನಿಯು ತನ್ನ ಷೇರುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುವ ಪ್ರಕ್ರಿಯೆ ನಡೆಸಿರುವ ಸಂದರ್ಭದಲ್ಲೇ ಈ ಬದಲಾವಣೆಗಳು ಆಗಿವೆ. ₹ 16,600 ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯು ತನ್ನ ಷೇರುದಾರರಿಂದ ಜುಲೈ 12ರಂದು ಅನುಮತಿ ಕೋರುವ ನಿರೀಕ್ಷೆ ಇದೆ.

ಪೇಟಿಎಂನಲ್ಲಿ ಯಾರ ಷೇರು ಎಷ್ಟಿದೆ?

ಕಂಪನಿ ಹೆಸರು;ಪ್ರಮಾಣ (%)

ಅಲಿಬಾಬಾದ ಆ್ಯಂಟ್‌ ಸಮೂಹ;29.71

ಸಾಫ್ಟ್‌ಬ್ಯಾಂಕ್ ವಿಷನ್ ಫಂಡ್;19.63

ಎಸ್‌ಎಐಎಫ್‌ ಪಾರ್ಟ್ನರ್ಸ್‌;18.56

ವಿಜಯ್ ಶೇಖರ್ ಶರ್ಮ;14.67

ಎಜಿಎಚ್ ಹೋಲ್ಡಿಂಗ್, ಟಿ ರೋವ್ ಪ್ರೈಸ್, ಡಿಸ್ಕವರಿ ಕ್ಯಾಪಿಟಲ್ ಮತ್ತು ಬರ್ಕ್‌ಶೈರ್‌ ಹಾತ್‌ವೇ ಕಂಪನಿಗಳು ತಲಾ ಶೇಕಡ 10ರಷ್ಟಕ್ಕಿಂತ ಕಡಿಮೆ ಷೇರುಪಾಲು ಹೊಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು