ಭಾನುವಾರ, ಸೆಪ್ಟೆಂಬರ್ 19, 2021
27 °C

₹16 ಸಾವಿರದ ಗಡಿ ದಾಟಿದ ಕೊಬ್ಬರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಯುಗಾದಿಯಿಂದ ಚೇತರಿಕೆಯ ಹಾದಿಯಲ್ಲಿರುವ ಕೊಬ್ಬರಿ ಧಾರಣೆ ಬುಧವಾರ ಕ್ವಿಂಟಲ್‌ಗೆ ಗರಿಷ್ಠ ₹16,800ರ ಗಡಿ ತಲುಪಿದೆ. 

ತಿಪಟೂರು ಮಂಡಿಯಲ್ಲಿ ಬುಧ ವಾರ ಕ್ವಿಂಟಲ್ ಕೊಬ್ಬರಿ ₹16,800ಕ್ಕೆ ಮಾರಾಟವಾಗಿದ್ದು, ಮೂರು ವರ್ಷಗಳ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟವಾದ ಗರಿಷ್ಠ ಬೆಲೆ ಇದಾಗಿದೆ. ಇನ್ನು ಕೆಲವು ದಿನಗಳಲ್ಲಿ ಇದು ₹18 ಸಾವಿರದ ಗಡಿ ತಲುಪುವ ನಿರೀಕ್ಷೆ ಹುಟ್ಟುಹಾಕಿದೆ.

ಕಳೆದ ವರ್ಷ ಲಾಕ್‍ಡೌನ್‌ಗೂ ಮೊದಲು ಕ್ವಿಂಟಲ್ ಕೊಬ್ಬರಿ ಬೆಲೆ ₹ 10,500 ಇತ್ತು. ಲಾಕ್‌ಡೌನ್‌ ಬಳಿಕ ಖರೀದಿ ಪುನರಾರಂಭಗೊಂಡಾಗ ₹ 11,200ಕ್ಕೆ ಏರಿಕೆಯಾಗಿತ್ತು. ಆದರೆ, ಏಕಾಏಕಿ ₹ 8,800ಕ್ಕೆ ಕುಸಿಯುವ ಮೂಲಕ ಬೆಲೆ ಏರಿಕೆ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ನಾಫೆಡ್‌ ಕೊಬ್ಬರಿ ಖರೀದಿ ಆರಂಭಿಸಿದ ಬಳಿಕವೂ ಬೆಲೆ ₹ 11 ಸಾವಿರದ ಆಸುಪಾಸಿನಲ್ಲಿಯೇ ಇತ್ತು. ಲಾಕ್‍ಡೌನ್ ಸಡಿಲಿಕೆ ನಂತರ ಮಹಾರಾಷ್ಟ್ರ, ಗುಜರಾತ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಿಂದ ಬೇಡಿಕೆ ಹೆಚ್ಚಾದ ಕಾರಣ, ಬೆಲೆ ಏರುತ್ತಲೇ ಸಾಗಿತು. ದೀಪಾವಳಿ ಸಂದರ್ಭದಲ್ಲಿ ₹ 13,000– ₹ 14,000 ತಲುಪುವ ಮೂಲಕ ಚೇತರಿಕೆ ಕಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು