ಭಾನುವಾರ, ಸೆಪ್ಟೆಂಬರ್ 15, 2019
27 °C

ಸಿಡಿಇಎಲ್‌ ಸಲಹೆಗೆ ಐಡಿಎಫ್‌ಸಿ ಸೆಕ್ಯುರಿಟೀಸ್‌ ನೇಮಕ

Published:
Updated:

ನವದೆಹಲಿ: ಕಾಫಿ ಡೇ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ನ (ಸಿಡಿಇಎಲ್‌) ಸಾಲದ ಸಮಸ್ಯೆ ಬಗೆಹರಿಸಲು ಇರುವ ಮಾರ್ಗಗಳನ್ನು ಕಂಡುಕೊಳ್ಳಲು ಐಡಿಎಫ್‌ಸಿ ಸೆಕ್ಯುರಿಟೀಸ್‌ ಸಲಹೆ ನೀಡಲಿದೆ.

ಕಾಫಿ ಡೇ ಗ್ಲೋಬಲ್‌ ಮತ್ತು ಇತರೆ ಸಮೂಹ ಕಂಪನಿಗಳ (ಸೋಶಿಯಲ್‌ ಲಾಜಿಸ್ಟಿಕ್ಸ್‌ ಹೊರತುಪಡಿಸಿ) ಷೇರು ವಿಕ್ರಯವೂ ಸೇರಿದಂತೆ ಸಾಲ ತೀರಿಸಲು ಇರುವ ಆಯ್ಕೆಗಳ ಕುರಿತು ಐಡಿಎಫ್‌ಸಿ ಸೆಕ್ಯುರಿಟೀಸ್‌ ಅಗತ್ಯವಾದ ಸಲಹೆ, ಸೂಚನೆಗಳನ್ನು ನೀಡಲಿದೆ.

ಕಾರ್ಯನಿರ್ವಾಹಕ ಸಮಿತಿಯು ಐಡಿಎಫ್‌ಸಿ ಸೆಕ್ಯುರಿಟೀಸ್‌ ಅನ್ನು ಸಲಹೆ ನೀಡಲು ನೇಮಿಸಿದೆ ಎಂದು ಸಿಡಿಇಎಲ್‌ ಶನಿವಾರ ಷೇರುಪೇಟೆಗೆ ಮಾಹಿತಿ ನೀಡಿದೆ.

ಸಿಡಿಇಎಲ್‌ ಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರು ಕಂಪನಿಯ ದೊಡ್ಡ ಮೊತ್ತದ ಸಾಲ ಮರುಪಾವತಿಸಲು ಸಾಧ್ಯವಾಗದೇ ಸಾವಿಗೆ ಶರಣಾಗಿದ್ದಾರೆ. ಹೀಗಾಗಿ ಸಾಲದ ಹೊರೆ ತಗ್ಗಿಸಲು ಸಿಡಿಇಎಲ್‌ ಮೇಲೆ ಹೆಚ್ಚಿನ ಒತ್ತಡ ಬಂದಿದೆ. 

ಬೆಂಗಳೂರಿನಲ್ಲಿರುವ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್‌ ಅನ್ನು ಅಮೆರಿಕದ ಬ್ಲಾಕ್‌ಸ್ಟೋನ್‌ ಕಂಪನಿಗೆ ಮಾರಾಟ ಮಾಡಲು ಸಿಡಿಇಎಲ್‌ ಆಡಳಿತ ಮಂಡಳಿಯು ಈಚೆಗಷ್ಟೇ ಒಪ್ಪಿಗೆ ನೀಡಿದೆ. ಇದರಿಂದ ₹3 ಸಾವಿರ ಕೋಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿದೆ.

Post Comments (+)