ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌, ಡಿಸೆಂಬರ್‌ ಅವಧಿಯಲ್ಲಿ ಚಿನ್ನದ ಆಮದು ಶೇ 6.77ರಷ್ಟು ಇಳಿಕೆ

Last Updated 26 ಜನವರಿ 2020, 13:38 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಚಿನ್ನದ ಆಮದು ಶೇ 6.77ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

ಚಿನ್ನದ ಆಮದು ಇಳಿಕೆಯಾಗಿರುವುದರಿಂದ ವ್ಯಾಪಾರ ಕೊರತೆ ಅಂತರ ₹ 10.50 ಲಕ್ಷ ಕೋಟಿಗಳಿಂದ ₹ 8.37 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

2019ರ ಜುಲೈನಿಂದಲೂ ಚಿನ್ನದ ಆಮದು ನಕಾರಾತ್ಮಕ ಬೆಳವಣಿಗೆ ಕಾಣುತ್ತಿದ್ದು, ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಿನಲ್ಲಿ ಮಾತ್ರವೇ ಆಮದು ಏರಿಕೆ ಕಂಡಿತ್ತು.

ಚಿನ್ನದ ಆಮದು ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರ ಆಮದು ಸುಂಕವನ್ನು ಶೇ 10 ರಿಂದ ಶೇ 12.5ಕ್ಕೆ ಏರಿಕೆ ಮಾಡಿದೆ. ಆದರೆ, ಗರಿಷ್ಠ ಸುಂಕದಿಂದಾಗಿ ತಯಾರಕರು ಬೇರೆ ದೇಶಗಳಿಗೆ ಹೋಗುತ್ತಿದ್ದಾರೆ ಎಂದು ಉದ್ಯಮ ವಲಯದ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಹರಳು ಮತ್ತು ಚಿನ್ನಾಭರಣ ರಫ್ತು ಶೇ 6.4ರಷ್ಟು ಇಳಿಕೆಯಾಗಿದ್ದು, ಮೌಲ್ಯದ ಲೆಕ್ಕದಲ್ಲಿ ₹ 1.98 ಲಕ್ಷ ಕೋಟಿಗಳಷ್ಟಿದೆ. ಹೀಗಾಗಿ‌ಆಮದು ಸುಂಕವನ್ನು ಶೇ 4ಕ್ಕೆ ತಗ್ಗಿಸುವಂತೆ ಹರಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನ ಸಮಿತಿ ಬೇಡಿಕೆ ಇಟ್ಟಿದೆ.

ಆಮದು ಅಂಕಿಅಂಶ

2019–20 ಏಪ್ರಿಲ್‌–ಡಿಸೆಂಬರ್‌:₹ 1.63ಲಕ್ಷ ಕೋಟಿ

2018–19 ಏಪ್ರಿಲ್‌–ಡಿಸೆಂಬರ್‌:₹ 1.77ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT