ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ, ಸ್ವಿಗ್ಗಿ ವಿರುದ್ಧ ತನಿಖೆಗೆ ಸಿಸಿಐ ಆದೇಶ

Last Updated 4 ಏಪ್ರಿಲ್ 2022, 15:34 IST
ಅಕ್ಷರ ಗಾತ್ರ

ನವದೆಹಲಿ: ರೆಸ್ಟಾರೆಂಟ್‌ಗಳಿಂದ ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಮತ್ತು ಜೊಮ್ಯಾಟೊ ಕಂಪನಿಗಳ ವಿರುದ್ಧ ತನಿಖೆಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಸೋಮವಾರ ಆದೇಶಿಸಿದೆ.

ರಾಷ್ಟ್ರೀಯ ರೆಸ್ಟಾರೆಂಟ್‌ ಸಂಘ (ಎನ್‌ಆರ್‌ಎಐ) ಸಲ್ಲಿಸಿದ ದೂರು ಆಧರಿಸಿ ಈ ಆದೇಶ ಹೊರಡಿಸಲಾಗಿದೆ. ‘ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವಾ ಕ್ಷೇತ್ರದಲ್ಲಿ ಜೊಮ್ಯಾಟೊ ಮತ್ತು ಸ್ವಿಗ್ಗಿ ಪ್ರಮುಖ ವೇದಿಕೆಗಳು. ಇದು ಈ ಕಂಪನಿಗಳ ಮಾರುಕಟ್ಟೆ ಶಕ್ತಿಯನ್ನು ತೋರಿಸುತ್ತಿದೆ. ಸಮಾನ ನೆಲೆಯಲ್ಲಿ ಆಗಬೇಕಿರುವ ಸ್ಪರ್ಧೆಯ ಮೇಲೆ ಪರಿಣಾಮ ಉಂಟುಮಾಡುವಷ್ಟು ಇವು ಶಕ್ತಿಶಾಲಿ ಆಗಿರುವುದನ್ನೂ ತೋರಿಸುತ್ತಿದೆ’ ಎಂದು ಸಿಸಿಐ ಹೇಳಿದೆ.

ಈ ವೇದಿಕೆಗಳು ಈಕ್ವಿಟಿ ಪಾಲು ಅಥವಾ ಆದಾಯದ ಹಿತಾಸಕ್ತಿ ಹೊಂದಿರುವ ರೆಸ್ಟಾರೆಂಟ್‌ ಪಾಲುದಾರರಿಗೆ ವಿಶೇಷ ಆದ್ಯತೆ ನೀಡುವುದು ಈಗಾಗಲೇ ಇರುವ ರೆಸ್ಟಾರೆಂಟ್‌ ಪಾಲುದಾರರಿಗೆ ಅಡ್ಡಿಯಂತೆ ಪರಿಣಮಿಸಬಹುದು ಎಂದು ಸಿಸಿಐ ಹೇಳಿದೆ.

ಸ್ವಿಗ್ಗಿ ಮತ್ತು ಜೊಮ್ಯಾಟೊ ಜೊತೆಗಿನ ಒಪ್ಪಂದದ ನಿಯಮಗಳಲ್ಲಿ ಇರುವ ಕೆಲವು ಅಂಶಗಳು ರೆಸ್ಟಾರೆಂಟ್‌ ಪಾಲುದಾರರಿಗೆ ಕನಿಷ್ಠ ಬೆಲೆಯನ್ನು ಕಾಯ್ದುಕೊಳ್ಳಲು ಅವಕಾಶ ಕೊಡುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಿವೆ ಎಂದು ಕೂಡ ಸಿಸಿಐ ಹೇಳಿದೆ.

ಜೊಮ್ಯಾಟೊ ಮತ್ತು ಸ್ವಿಗ್ಗಿ ಆಹಾರ ಪದಾರ್ಥಗಳ ಪೂರೈಕೆ ವಲಯದಲ್ಲಿ ದೊಡ್ಡ ವೇದಿಕೆಗಳು. ಇವು ಹೊಂದಿರುವ ಕೆಲವು ನಿಯಮಗಳು, ಹೊಸ ವೇದಿಕೆಗಳಿಗೆ ಈ ಕ್ಷೇತ್ರ ಪ್ರವೇಶಿಸಲು ಅಡ್ಡಿಯಾಗುತ್ತಿರುವ ಸಾಧ್ಯತೆ ಇದೆ ಎಂದು ಸಿಸಿಐ ತನ್ನ 32 ಪುಟಗಳ ಆದೇಶದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT