ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಧಾರಣೆ ಕುಸಿತ: ಆತಂಕ

Last Updated 29 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ತಿಪಟೂರು: ಏಳೆಂಟು ತಿಂಗಳಿಂದ ಆಶಾದಾಯಕವಾಗಿದ್ದ ತಿಪಟೂರು ಎಪಿಎಂಸಿ ಕೊಬ್ಬರಿ ಧಾರಣೆ ಈಗ ಭಾರಿ ಕುಸಿತ ಕಂಡಿದ್ದು, ರೈತರಲ್ಲಿ ಆತಂಕ ಮೂಡಿದೆ.

ಈಚೆಗೆ ಧಾರಣೆ ಕ್ವಿಂಟಲ್‍ಗೆ ₹ 17,500ದವರೆಗೆ ಮುಟ್ಟಿತ್ತು. ಬರದ ನಡುವೆ ತೆಂಗಿನ ಮರಗಳು ಸೊರಗಿ ಉತ್ಪನ್ನ ಕುಸಿದಿದ್ದರೂ ಧಾರಣೆ ಸಮಾಧಾನ ತಂದಿತ್ತು. ಬುಧವಾರದ ಎಪಿಎಂಸಿ ಹರಾಜಿನಲ್ಲಿ ₹ 12,500ಕ್ಕೆ ಕುಸಿದಿತ್ತು.

‘ಎಪಿಎಂಸಿ ಮಾರುಕಟ್ಟೆ ಮೂಲಕವೇ ಕೊಬ್ಬರಿ ಮಾರಾಟವಾಗಬೇಕು. ಆದರೆ, ಸಣ್ಣಪುಟ್ಟ ಊರು ಗಳಲ್ಲೂ ರೈತರಿಂದ ನೇರವಾಗಿ ಖರೀದಿಸಿ ಅಕ್ರಮವಾಗಿ ವಹಿವಾಟು ನಡೆಸುವವರು ಹೆಚ್ಚಿದ್ದಾರೆ. ಇದು ಕೂಡ ಧಾರಣೆ ಕುಸಿತಕ್ಕೆ ಕಾರಣ’ ಎಂದು ಎಪಿಎಂಸಿ ಉಪಾಧ್ಯಕ್ಷಬಜಗೂರು ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT