ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಲಯಗಳ ಬೆಳವಣಿಗೆ ಹೆಚ್ಚಳ

Last Updated 30 ಜೂನ್ 2022, 16:15 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ ಎಂಟು ಮೂಲಸೌಕರ್ಯ ವಲಯಗಳು ಮೇ ತಿಂಗಳಿನಲ್ಲಿ ಶೇಕಡ 18.1ರಷ್ಟು ಬೆಳವಣಿಗೆ ಕಂಡಿವೆ. ಇವು ಕಳೆದ ವರ್ಷದ ಮೇ ತಿಂಗಳಲ್ಲಿ ಶೇ 16.4ರಷ್ಟು ಬೆಳವಣಿಗೆ ಕಂಡಿದ್ದವು.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಘಟಕಗಳಿಂದ ಬರುವ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್ ವಲಯಗಳ ಉತ್ಪಾದನೆಯು 2022ರ ಏಪ್ರಿಲ್‌ನಲ್ಲಿ ಶೇ 9.3ರಷ್ಟು ಇತ್ತು.

2022–23ರ ಏಪ್ರಿಲ್‌–ಮೇ ಅವಧಿಯಲ್ಲಿ ಈ ವಲಯಗಳ ಬೆಳವಣಿಗೆಯು ಶೇ 13.6ರಷ್ಟು ಆಗಿದೆ. 2021–22ರ ಇದೇ ಅವಧಿಯಲ್ಲಿ ಆಗಿದ್ದ ಶೇ 36.3ರಷ್ಟು ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಇಳಿಳಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT