ಗುರುವಾರ , ಏಪ್ರಿಲ್ 2, 2020
19 °C
ಡನ್‌ ಆ್ಯಂಡ್‌ ಬ್ರ್ಯಾಡ್‌ಸ್ಟ್ರೀಟ್‌ ವರದಿಯಲ್ಲಿ ಉಲ್ಲೇಖ

ಕೋವಿಡ್‌–19: ಆರ್ಥಿಕತೆ ಚೇತರಿಕೆಗೆ ಅಡ್ಡಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ಚೀನಾದಲ್ಲಿ ಆತಂಕ ಸೃಷ್ಟಿಸಿರುವ ‘ಕೋವಿಡ್‌–19’ ವೈರಸ್‌ ಹಾವಳಿಯಿಂದ ಉಂಟಾಗಿರುವ ಬಿಡಿಭಾಗ ಮತ್ತು ಕಚ್ಚಾ ಸರಕು ಪೂರೈಕೆ ವ್ಯತ್ಯಯದಿಂದಾಗಿ ಭಾರತದ ಆರ್ಥಿಕತೆ ಚೇತರಿಕೆಗೆ ಪೆಟ್ಟು ಬೀಳಲಿದೆ ಎಂದು ವರದಿಯೊಂದರಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ವೈರಸ್‌ ಹಾವಳಿ ಇನ್ನಷ್ಟು ದಿನಗಳ ಕಾಲ ಹೀಗೆಯೇ ಮುಂದುವರೆದರೆ ಬಿಡಿಭಾಗಗಳ ಪೂರೈಕೆಯಲ್ಲಿನ ವ್ಯತ್ಯಯದ ಕಾರಣಕ್ಕೆ ಸರಕುಗಳನ್ನು ತಯಾರಿಸುವ ದೇಶಿ ಕಂಪನಿಗಳು ತಮ್ಮ ತಯಾರಿಕಾ ಚಟುವಟಿಕೆಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಬೇಕಾಗುತ್ತದೆ.

‘ವ್ಯಾಪಕವಾಗಿ ಹರಡುತ್ತಿರುವ ವೈರಸ್‌ ಸೋಂಕಿನಿಂದಾಗಿ ಸರಕುಗಳ ಜಾಗತಿಕ ಪೂರೈಕೆ ಸರಣಿ ಜತೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಳಕು ಹಾಕಿಕೊಂಡಿರುವ ಭಾರತದ ಉದ್ದಿಮೆ ಮತ್ತು ವ್ಯಾಪಾರಕ್ಕೆ ಹಾನಿ ತಟ್ಟಲಿದೆ’ ಎಂದು ಡನ್‌ ಆ್ಯಂಡ್‌ ಬ್ರಾಡ್‌ಸ್ಟ್ರೀಟ್‌ ಇಂಡಿಯಾದ ಮುಖ್ಯ ಆರ್ಥಿಕ ತಜ್ಞ ಅರುಣ್ ಸಿಂಗ್ ಹೇಳಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು