ಬೆಂಗಳೂರು: ‘ಕಾಸ್ಮೋಸ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಬೆಂಗಳೂರಿನ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ವಿಲೀನವಾಗಿ ಒಂದು ವರ್ಷ ಪೂರ್ಣಗೊಂಡಿದೆ’ ಎಂದು ಕಾಸ್ಮೋಸ್ ಬ್ಯಾಂಕ್ನ ಅಧ್ಯಕ್ಷ ಪ್ರಹ್ಲಾದ್ ಕೋಕರೆ ಹೇಳಿದ್ದಾರೆ.

ಎಲ್ಲ ಸದಸ್ಯರು, ಠೇವಣಿದಾರರು ಮತ್ತು ಖಾತೆದಾರರು ಕಾಸ್ಮೋಸ್ ಬ್ಯಾಂಕ್ನಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ನ ಠೇವಣಿ ಯೋಜನೆಗಳು ಮತ್ತು ಬಂಡವಾಳದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.

120 ವರ್ಷಗಳ ಇತಿಹಾಸ ಹೊಂದಿರುವ ಕಾಸ್ಮೋಸ್ ಬ್ಯಾಂಕ್, ಏಳು ರಾಜ್ಯಗಳಲ್ಲಿ 183 ಶಾಖೆಗಳನ್ನು ನಿರ್ವಹಣೆ ಮಾಡುತ್ತಿದೆ. 2025ರ ಡಿಸೆಂಬರ್ ಅಂತ್ಯಕ್ಕೆ ಬ್ಯಾಂಕ್ನ ಒಟ್ಟು ವ್ಯವಹಾರ ₹39,900 ಕೋಟಿ ದಾಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಳೆದ ವರ್ಷ 3,575 ಹೊಸ ಚಾಲ್ತಿ ಮತ್ತು ಉಳಿತಾಯ ಖಾತೆ ಹಾಗೂ 4,372 ಹೊಸ ಆರ್.ಡಿ ಖಾತೆ ತೆರೆಯಲಾಗಿದೆ’ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಅಪೇಕ್ಷಿತಾ ತಿಪ್ಸೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.