ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಮಾರಾಟ ಶೇ 58ರಷ್ಟು ತಗ್ಗಿಸಿದ ಕೋವಿಡ್‌ನ ಎರಡನೇ ಅಲೆ: ಪ್ರಾಪ್‌ಈಕ್ವಿಟಿ

Last Updated 1 ಆಗಸ್ಟ್ 2021, 1:53 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ದೇಶದಲ್ಲಿ ವಸತಿ ಮಾರಾಟವು 2021ರ ಎರಡನೇ ತ್ರೈಮಾಸಿಕದಲ್ಲಿ ಶೇ 58ರಷ್ಟು ಇಳಿಕೆ ಕಂಡಿದೆ ಎಂದು ಪ್ರಾಪ್‌ಈಕ್ವಿಟಿ ಸಂಸ್ಥೆ ಹೇಳಿದೆ.

ಪ್ರಮುಖ ನಗರಗಳಲ್ಲಿ ಕಠಿಣ ಸ್ವರೂಪದ ಲಾಕ್‌ಡೌನ್‌ ಮತ್ತು ಗೃಹ ಸಾಲ ವಿತರಣೆಯ ಮಂದಗತಿಯಲ್ಲಿ ಇದ್ದ ಕಾರಣಕ್ಕಾಗಿ ವಸತಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್‌, ಕೋಲ್ಕತ್ತ, ಮುಂಬೈ ಮಹಾನಗರ ಪಾಲಿಕೆ, ಎನ್‌ಸಿಆರ್‌ ಮತ್ತು ಪುಣೆ ನಗರಗಳಲ್ಲಿ ವಸತಿ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ ಎಂದು ಮಾಹಿತಿ ನೀಡಿದೆ. ಅದೇ ರೀತಿ ಹೊಸ ಯೋಜನೆಗಳ ಬಿಡುಗಡೆಯಲ್ಲಿಯೂ ಶೇ 54ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದೆ.

ಕೋವಿಡ್‌ನ ಮೊದಲ ಅಲೆಯಿಂದ ಹೊರಬಂದು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ ರಿಯಲ್‌ ಎಸ್ಟೇಟ್‌ ವಲಯಕ್ಕೆ ಎರಡನೇ ಅಲೆಯಿಂದ ಹೆಚ್ಚು ಹಾನಿ ಆಗಿದೆ. ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ವಿನಾಯಿತಿ, ವಿಶೇಷ ಪಾವತಿ ಕೊಡುಗೆಗಳು ಸೇರಿದಂತೆ ಇನ್ನೂ ಯೋಜನೆಗಳನ್ನು ನೀಡುವ ಅಗತ್ಯವಿದೆ ಎಂದು ಪ್ರಾಪ್‌ಈಕ್ವಿಟಿಯ ಸ್ಥಾಪಕ ಸಮೀರ್‌ ಜಸುಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT