ಪೇಟಿಎಂನಲ್ಲಿ ಕ್ರೆಡಿಟ್ ಸ್ಕೋರ್ ವಿವರ

ಭಾನುವಾರ, ಮೇ 26, 2019
32 °C

ಪೇಟಿಎಂನಲ್ಲಿ ಕ್ರೆಡಿಟ್ ಸ್ಕೋರ್ ವಿವರ

Published:
Updated:

ಬೆಂಗಳೂರು: ನಗದುರಹಿತ ಪಾವತಿ ಸಂಸ್ಥೆ ಪೇಟಿಎಂನಲ್ಲೇ ಗ್ರಾಹಕರು ಇನ್ನು ಮುಂದೆ ತಮ್ಮ ಕ್ರೆಡಿಟ್ ಸ್ಕೋರ್ ವಿವರಗಳನ್ನು ಪರಿಶೀಲಿಸಬಹುದು.

ಮೈ ಕ್ರೆಡಿಟ್ ಸ್ಕೋರ್ ಮೇಲೆ ಕ್ಲಿಕ್ ಮಾಡಿ, ಒಂದೇ ನಿಮಿಷದಲ್ಲಿ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬಹುದು. ಇದರ ಜೊತೆಗೆ ಸಾಲದ ಬಳಕೆ, ಮರುಪಾವತಿ ಇತಿಹಾಸ ಸೇರಿದಂತೆ ಇತರ ವಿವರಗಳನ್ನು ಒಳಗೊಂಡ ವಿವರವಾದ ವರದಿಯನ್ನೂ ಇ–ಮೇಲ್‌ ಮೂಲಕ ಗ್ರಾಹಕರು ಪಡೆಯಬಹುದು.

ಇದನ್ನು ಬಳಸಿ ತನ್ನ ಸಾಲ ಅರ್ಹತೆ ಎಷ್ಟಿದೆ ಎಂಬುದನ್ನು ಗ್ರಾಹಕರು ತಿಳಿದುಕೊಳ್ಳಬಹುದು. ಅಲ್ಲದೆ ಎಷ್ಟು ಕ್ರೆಡಿಟ್ ಕಾರ್ಡ್‌ ಮತ್ತು ಸಾಲ ಖಾತೆಗಳು ಚಾಲ್ತಿಯಲ್ಲಿವೆ ಎಂಬುದರ ವಿವರವೂ ಇದರಲ್ಲಿ ಲಭ್ಯವಾಗುತ್ತದೆ.

ಇದೆಲ್ಲದರ ಜೊತೆಗೆ ಗ್ರಾಹಕರು ತಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುವುದು ಹೇಗೆ ಎಂಬ ಸಲಹೆಯನ್ನೂ ಪಡೆಯಬಹುದಾಗಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !