ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾ ತೈಲ ಆಮದು ಶೇ 52ರಷ್ಟು ಹೆಚ್ಚಳ

Last Updated 16 ಡಿಸೆಂಬರ್ 2022, 14:24 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್ ಅವಧಿಯಲ್ಲಿ ₹12.13 ಲಕ್ಷ ಕೋಟಿ ಮೌಲ್ಯದ ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 52.58ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

ಚಿನ್ನದ ಆಮದು ಶೇ 18ರಷ್ಟು ಇಳಿಕೆ ಕಂಡಿದ್ದು ಮೌಲ್ಯದ ಲೆಕ್ಕದಲ್ಲಿ ₹2.25 ಲಕ್ಷ ಕೋಟಿಯಷ್ಟು ಆಗಿದೆ. ಎಲೆಕ್ಟ್ರಾನಿಕ್ಸ್‌, ರಾಸಾಯನಿಕ ವಸ್ತುಗಳ ಆಮದು ಎರಡಂಕಿ ಬೆಳವಣಿಗೆ ಕಂಡಿವೆ.

ಎಂಜಿನಿಯರಿಂಗ್‌ ವಸ್ತುಗಳು, ಹತ್ತಿ ಬಟ್ಟೆ ಮತ್ತು ಪ್ಲಾಸ್ಟಿಕ್‌ ರಫ್ತು ನಕಾರಾತ್ಮಕ ಬೆಳವಣಿಗೆ ಕಂಡಿವೆ. ಪೆಟ್ರೋಲಿಯಂ ರಫ್ತು ಶೇ 59ರಷ್ಟು ಹೆಚ್ಚಾಗಿದ್ದು, ₹5.18 ಲಕ್ಷ ಕೋಟಿಗೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT