ಶನಿವಾರ, ಜನವರಿ 23, 2021
22 °C

9 ತಿಂಗಳಿನಲ್ಲಿ ನಗದು ಚಲಾವಣೆ ₹ 3.23 ಲಕ್ಷ ಕೋಟಿಗಳಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳುಗಳಲ್ಲಿ ನಗದು ಚಲಾವಣೆಯಲ್ಲಿ ಶೇಕಡ 13ರಷ್ಟು ಏರಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.

ಕೋವಿಡ್‌–19 ಸಾಂಕ್ರಾಮಿಕವು ಸೃಷ್ಟಿಸಿರುವ ಅನಿಶ್ಚಿತ ಸ್ಥಿತಿಯ ಕಾರಣದಿಂದಾಗಿ ಜನ ತಮ್ಮ ಬಳಿ ನಗದು ಇಟ್ಟುಕೊಳ್ಳಲು ಬಯಸಿದ್ದಾರೆ. ಹೀಗಾಗಿ ನಗದು ಚಲಾವಣೆ ಹೆಚ್ಚಾಗಿದೆ.

2020ರ ಮಾರ್ಚ್‌ 31ರ ಅಂತ್ಯಕ್ಕೆ ₹ 24,47,312 ಕೋಟಿ ಮೊತ್ತದ ನಗದು ಚಲಾವಣೆಯಲ್ಲಿ ಇತ್ತು. 2021ರ ಜನವರಿ 1ರ ವೇಳೆಗೆ ಅದು ₹ 3,23,002 ಕೋಟಿಯಷ್ಟು (ಶೇ 13.2) ಹೆಚ್ಚಾಗಿ ₹ 27,70,315 ಕೋಟಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. 2019–20ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ಶೇ 6ರಷ್ಟು ಏರಿಕೆ ಆಗಿತ್ತು.

ಆರ್‌ಬಿಐನ ವಾರ್ಷಿಕ ವರದಿಯ ಪ್ರಕಾರ, 2019-20ನೇ ಹಣಕಾಸು ವರ್ಷದಲ್ಲಿ ಚಲಾವಣೆಯಲ್ಲಿ ಇರುವ ಬ್ಯಾಂಕ್‌ ನೋಟುಗಳ ಮೌಲ್ಯವು ಶೇ 14.7ರಷ್ಟು, ಪ್ರಮಾಣವು ಶೇ 6.6ರಷ್ಟು ಏರಿಕೆ ಕಂಡಿದೆ. 2020ರ ಮಾರ್ಚ್‌ ಅಂತ್ಯದ ವೇಳೆಗೆ ಒಟ್ಟಾರೆ ಬ್ಯಾಂಕ್‌ ನೋಟುಗಳ ಮೌಲ್ಯದ ಲೆಕ್ಕದಲ್ಲಿ ₹ 500 ಮತ್ತು ₹ 2,000 ನೋಟುಗಳು ಶೇ 83.4ರಷ್ಟಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು