ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ–ಮಾರ್ಟ್‌ ವರಮಾನ ಶೇ 20ರಷ್ಟು ಏರಿಕೆ

Published 4 ಏಪ್ರಿಲ್ 2024, 14:21 IST
Last Updated 4 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ಡಿ–ಮಾರ್ಟ್‌ ಮಳಿಗೆಗಳ ಒಡೆತನ ಹೊಂದಿರುವ ಅವೆನ್ಯು ಸೂಪರ್‌ಮಾರ್ಟ್ಸ್‌ ಕಂಪನಿಯ ಕಾರ್ಯಾಚರಣೆ ವರಮಾನವು 2023–24ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 19.89ರಷ್ಟು ಏರಿಕೆಯಾಗಿದೆ.

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹10,337 ಕೋಟಿ ವರಮಾನ ಕಂಡಿದ್ದ ಕಂಪನಿಯು ಪ್ರಸಕ್ತ ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ₹12,393 ಕೋಟಿ ಗಳಿಸಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

2021-22ರಲ್ಲಿ ಕಂಪನಿಯು ₹8,606 ಕೋಟಿ ನಿವ್ವಳ ವರಮಾನ ಗಳಿಸಿತ್ತು.

ಮಹಾರಾಷ್ಟ್ರ, ಗುಜರಾತ್‌, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ತೆಲಂಗಾಣ, ಛತ್ತೀಸಗಢ, ನವದೆಹಲಿ, ತಮಿಳುನಾಡು, ಪಂಜಾಬ್‌ ಮತ್ತು ರಾಜಸ್ಥಾನದಲ್ಲಿ ಕಂಪನಿಯ ಒಟ್ಟು 365 ಮಳಿಗೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT