ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನಗಳಲ್ಲಿ ಎಥೆನಾಲ್ ಎಂಜಿನ್‌ ಬಳಕೆ; ನಿರ್ಧಾರ ಶೀಘ್ರ: ಗಡ್ಕರಿ

Last Updated 20 ಜೂನ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಎಥೆನಾಲ್‌ ಮತ್ತು ಪೆಟ್ರೋಲ್‌ ಬಳಸಲು ಸಾಧ್ಯವಾಗುವ ಎಂಜಿನ್‌ಗಳನ್ನು ವಾಹನಗಳಲ್ಲಿ ಅಳವಡಿಸುವ ಕುರಿತು ಎಂಟರಿಂದ 10 ದಿನಗಳಲ್ಲಿ ಸರ್ಕಾರವು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಪರ್ಯಾಯ ಇಂಧನವಾದ ಎಥೆನಾಲ್ ಬೆಲೆ ಪ್ರತಿ ಲೀಟರಿಗೆ ₹ 60ರಿಂದ ₹ 62ರಷ್ಟಿದೆ. ಪೆಟ್ರೋಲ್‌ ದರವು ಲೀಟರಿಗೆ ದೇಶದ ಹಲವು ಭಾಗಗಳಲ್ಲಿ ₹ 100ಕ್ಕಿಂತ ಹೆಚ್ಚಿದೆ. ಎಥೆನಾಲ್ ಬಳಕೆಯಿಂದ ಭಾರತೀಯರಿಗೆ ಪ್ರತಿ ಲೀಟರಿಗೆ ₹ 30ರಿಂದ ₹ 35ರವರೆಗೆ ಉಳಿತಾಯವಾಗಲಿದೆ’ ಎಂದರು.

ಎಥೆನಾಲ್‌ ಬಳಕೆಯಿಂದ ರೈತರಿಗೆ ಅನುಕೂಲ ಆಗುವ ಜತೆಗೆ ದೇಶದ ಆರ್ಥಿಕ ಬೆಳವಣಿಗೆಗೂ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪೆಟ್ರೋಲ್ ಮಾತ್ರ ಬಳಸುವ ಎಂಜಿನ್ ಇರಬಾರದು. ಎಥೆನಾಲ್‌ ಅಥವಾ ಪೆಟ್ರೋಲ್‌ ಇವೆರಡರಲ್ಲಿ ಯಾವುದನ್ನು ಬೇಕಿದ್ದರೂ ಬಳಸಲು ಆಗುವಂತಹ ಎಂಜಿನ್‌ ಇರಬೇಕು ಎಂದು ಸಾರಿಗೆ ಸಚಿವನಾಗಿ ನಾನು ಉದ್ಯಮಕ್ಕೆ ಆದೇಶಿಸಲಿದ್ದೇನೆ. ಇಂತಹ ಆಯ್ಕೆ ಇದ್ದರೆ ಶೇಕಡ 100ರಷ್ಟು ಕಚ್ಚಾ ತೈಲ ಅಥವಾ ಶೇ 100ರಷ್ಟು ಎಥೆನಾಲ್‌ ಬಳಕೆಗೆ ಜನರಿಗೆ ಅವಕಾಶ ಸಿಗಲಿದೆ’ ಎಂದು ಹೇಳಿದ್ದಾರೆ.

ಪೆಟ್ರೋಲ್‌ಗಿಂತಲೂ ಎಥೆನಾಲ್‌ ಉತ್ತಮ ಇಂಧನ. ಕಡಿಮೆ ವೆಚ್ಚದ್ದು ಮತ್ತು ಮಾಲಿನ್ಯ ಮುಕ್ತವೂ ಆಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT