ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ

Last Updated 13 ಡಿಸೆಂಬರ್ 2019, 5:53 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಸಂಗ್ರಹವು ಬಜೆಟ್‌ ಅಂದಾಜಿಗಿಂತಲೂ ಶೇ. 40ರಷ್ಟು ಕಡಿಮೆಯಾಗಿದೆ.

ಈ ಅವಧಿಯಲ್ಲಿ ₹ 5.26 ಲಕ್ಷ ಕೋಟಿ ಸಿಜಿಎಸ್‌ಟಿ ಸಂಗ್ರಹವಾಗುವ ಅಂದಾಜು ಮಾಡಲಾಗಿತ್ತು. ಆದರೆ ಸಂಗ್ರಹವಾಗಿರುವುದು ₹ 3.28 ಲಕ್ಷ ಕೋಟಿಗಳಷ್ಟು ಮಾತ್ರ.

ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್‌ ಠಾಕೂರ್‌ ಅವರು ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ. ಈ ಅಂಕಿ–ಅಂಶಗಳು ತಾತ್ಕಾಲಿಕ ಎಂದೂ ಅವರು ಹೇಳಿದ್ದಾರೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್‌ವರೆಗೆ 999 ತೆರಿಗೆ ವಂಚನೆ ಪ್ರಕರಣಗಳು ದಾಖಲಾಗಿದ್ದು, ₹ 8.13 ಲಕ್ಷ ಕೋಟಿಗಳಷ್ಟು ವಸೂಲಿ ಮಾಡಲಾಗಿದೆ. 2018–19ರಲ್ಲಿ ₹ 19,395 ಕೋಟಿ ಹಾಗೂ ₹ 2017–18ರಲ್ಲಿ ₹ 758 ಕೋಟಿ ವಸೂಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ

ಸಿಜಿಎಸ್‌ಟಿ ಸಂಗ್ರಹ

ವರ್ಷ; ಅಂದಾಜು; ಸಂಗ್ರಹ

2018–19; ₹ 6.03 ಲಕ್ಷ ಕೋಟಿ; ₹ 4.57 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT