ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಮ್ಯಾಟ್ ಖಾತೆ: ಶೇಕಡ 41ರಷ್ಟು ಹೆಚ್ಚಳ

Last Updated 20 ನವೆಂಬರ್ 2022, 14:21 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಡಿಮ್ಯಾಟ್ ಖಾತೆಗಳ ಪ್ರಮಾಣವು ಒಂದು ವರ್ಷದಲ್ಲಿ ಶೇಕಡ 41ರಷ್ಟು ಹೆಚ್ಚಾಗಿದೆ. ಈ ವರ್ಷದ ಅಕ್ಟೋಬರ್‌ ವೇಳೆಗೆ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 10.4 ಕೋಟಿ ಆಗಿದೆ. ಹಿಂದಿನ ವರ್ಷದ ಅಕ್ಟೋಬರ್‌ ಸಂದರ್ಭದಲ್ಲಿ ಒಟ್ಟು 7.4 ಕೋಟಿ ಡಿಮ್ಯಾಟ್ ಖಾತೆಗಳು ಇದ್ದವು.

ಮೋತಿಲಾಲ್ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ವಿಶ್ಲೇಷಕರು ನಡೆಸಿರುವ ಅಧ್ಯಯನ ಪ್ರಕಾರ, ಡಿಮ್ಯಾಟ್ ಖಾತೆ ತೆರೆಯುವ ಪ್ರಮಾಣವು ಆಗಸ್ಟ್‌ನಿಂದ ಕಡಿಮೆ ಆಗುತ್ತಿದೆ. ಆಗಸ್ಟ್‌ನಲ್ಲಿ 26 ಲಕ್ಷ, ಸೆಪ್ಟೆಂಬರ್‌ನಲ್ಲಿ 20 ಹಾಗೂ ಅಕ್ಟೋಬರ್‌ನಲ್ಲಿ 18 ಲಕ್ಷ ಖಾತೆಗಳನ್ನು ತೆರೆಯಲಾಗಿದೆ.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಕಂಡುಬಂದಿರುವ ಅಸ್ಥಿರ ವಾತಾವರಣದ ಕಾರಣದಿಂದಾಗಿ ಹೊಸ ಡಿಮ್ಯಾಟ್ ಖಾತೆ ಆರಂಭಿಸುವಿಕೆಯು ಕಡಿಮೆ ಆಗಿರಬಹುದು ಎಂದು ಆನಂದ್ ರಾಠಿ ಷೇರ್ಸ್ ಆ್ಯಂಡ್ ಸ್ಟಾಕ್ ಬ್ರೋಕರ್ಸ್ ಕಂಪನಿಯ ಹೂಡಿಕೆ ಸೇವೆಗಳ ಸಿಇಒ ರೂಪ್ ಭೂತ್ರಾ ಹೇಳಿದ್ದಾರೆ.

ದೇಶದಲ್ಲಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಈಗಲೂ ಕಡಿಮೆ ಇರುವ ಕಾರಣ, ಮುಂದಿನ ದಿನಗಳಲ್ಲಿ ಡಿಮ್ಯಾಟ್ ಖಾತೆ ತೆರೆಯುವುದು ಹೆಚ್ಚಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ನ ಹಿರಿಯ ಸಮೂಹ ಉಪಾಧ್ಯಕ್ಷ ನಿತಿನ್ ಅಗರ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT