ಶುಕ್ರವಾರ, ಅಕ್ಟೋಬರ್ 29, 2021
20 °C

ಮುಂಬೈನಲ್ಲಿ ₹ 100ರ ಗಡಿ ದಾಟಿದ ಡೀಸೆಲ್‌ ದರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಸತತ ಐದನೇ ದಿನವೂ ಇಂಧನ ದರ ಹೆಚ್ಚಾಗಿದೆ. ಶನಿವಾರ ಪೆಟ್ರೋಲ್‌ ದರ ಲೀಟರಿಗೆ 30 ಪೈಸೆ ಮತ್ತು ಡೀಸೆಲ್‌ ದರ ಲೀಟರಿಗೆ 35 ಪೈಸೆ ಹೆಚ್ಚಿಸಿವೆ.

ಶನಿವಾರದ ದರ ಏರಿಕೆಯಿಂದಾಗಿ ಮುಂಬೈನಲ್ಲಿ ಡೀಸೆಲ್‌ ದರವು ಲೀಟರಿಗೆ ₹ 100ರ ಗಡಿ ದಾಟಿದ್ದು, ₹100.29ರಂತೆ ಮಾರಾಟವಾಯಿತು. ಪೆಟ್ರೋಲ್‌ ದರ ₹ 109.83ರಷ್ಟಾಗಿದೆ. ದೆಹಲಿಯಲ್ಲಿ ಪೆಟ್ರೋಲ್‌ ದರ ₹ 103.84 ಮತ್ತು ಡೀಸೆಲ್‌ ದರ ₹ 92.47ರಷ್ಟಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರಿಗೆ ₹ 107.41 ಮತ್ತು ಡೀಸೆಲ್‌ ದರ ಲೀಟರಿಗೆ ₹ 98.11ಕ್ಕೆ ಏರಿಕೆ ಆಗಿದೆ.

‘ಒಪೆಕ್‌+’ ಒಕ್ಕೂಟ ಪ್ರತಿ ದಿನಕ್ಕೆ 4 ಲಕ್ಷ ಬ್ಯಾರಲ್‌ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದನೆ ಮಾಡದೇ ಇರಲು ನಿರ್ಧರಿಸಿವೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಬ್ಯಾರಲ್‌ಗೆ ₹ 82 ಡಾಲರ್‌ಗಳಿಗೆ ಏರಿಕೆ ಆಗಿದೆ. ಈ ಕಾರಣದಿಂದಾಗಿ ದೇಶದಲ್ಲಿ ಇಂಧನ ದರ ಹೆಚ್ಚಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು